![](https://i0.wp.com/prakharanews.com/wp-content/uploads/2025/01/WhatsApp-Image-2025-01-21-at-12.33.45-PM-scaled.jpeg?fit=2048%2C2560&ssl=1)
ಬೆಂಗಳೂರು; ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೈಂದೂರು ಎಂಎಲ್‌ಎ ಟಿಕೆಟ್ ನೀಡುವುದಾಗಿ ಉದ್ಯಮಿ ಗೋವಿಂದಬಾಬುಗೆ ವಂಚನೆ ಸಂಬಂಧ ಚೈತ್ರಾ ಕುಂದಾಪುರ ಟೀಂ ಬಂಧಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುವಂತ ಅಭಿನಯ ಹಾಲಶ್ರೀ ಮಾತ್ರ ತಲೆ ಮರೆಸಿಕೊಂಡಿದ್ದಾರೆ.
![](https://i0.wp.com/prakharanews.com/wp-content/uploads/2025/01/WhatsApp-Image-2025-01-22-at-5.17.51-PM.jpeg?fit=1157%2C1600&ssl=1)
![](https://i0.wp.com/prakharanews.com/wp-content/uploads/2025/01/WhatsApp-Image-2025-01-23-at-5.27.18-PM.jpeg?fit=681%2C706&ssl=1)
![](https://i0.wp.com/prakharanews.com/wp-content/uploads/2025/01/girija-1.jpg?fit=1158%2C1756&ssl=1)
ಅವರ ಪತ್ತೆಗಾಗಿ ಈಗ ಅವರ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
![](https://i0.wp.com/prakharanews.com/wp-content/uploads/2025/01/IMG-20241214-WA0021-scaled.jpg?fit=1810%2C2560&ssl=1)
ಬಿಜೆಪಿ ಬೈಂದೂರು ಎಂ.ಎಲ್‌ಎ ಟಿಕೆಟ್ ಪಡೆಯಬೇಕಾದ್ರೇ ಅಭಿನಯ ಹಾಲಶ್ರೀ ಶಿಫಾರಸ್ಸು ಮುಖ್ಯ ಎಂಬುದಾಗಿ ಉದ್ಯಮಿ ಗೋವಿಂದಬಾಬುಗೆ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ಹೇಳಿತ್ತು. ಅದರಂತೆ ಉದ್ಯಮಿ ಅಭಿನಯ ಹಾಲಶ್ರೀಗಳನ್ನು ಬೆಂಗಳೂರಿನ ವಿಜಯನಗರದಲ್ಲಿ ಭೇಟಿಯಾಗಿದ್ದರು.
ಈ ಸಂದರ್ಭದಲ್ಲಿ ನನಗೆ ಬೈಂದೂರು ಉಸ್ತುವಾರಿಯನ್ನು ನೀಡಿದ್ದಾರೆ ಸೇರಿದಂತೆ ಕೇಂದ್ರದ ಬಿಜೆಪಿ ನಾಯಕರು ಪರಿಚಯ ಅಂತನೂ ಅಭಿನಯ ಹಾಲಶ್ರೀ ಬಿಲ್ಡಂಪ್ ನೀಡಿದ್ದರು. ಈ ಎಲ್ಲವನ್ನು ವಂಚನೆಯ ಬಳಿಕ ಉದ್ಯಮಿ ಗೋವಿಂದಬಾಬು ದೂರಿನಲ್ಲಿ ನೀಡಿದ್ದಾರೆ.
ಈ ಕೇಸ್ ನಲ್ಲಿ ತಲೆ ಮರೆಸಿಕೊಂಡಿರುವಂತ ಅಭಿನಯ ಹಾಲಶ್ರೀ ಬಂಧನಕ್ಕಾಗೆ ಅವರ ಕಾರು ಚಾಲಕನಿಂದ ಮಾಹಿತಿ ಕಲೆ ಹಾಕೋ ಸಂಬಂಧ ಈಗ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.