ಸ್ನೇಹಕಲಾ ವೃಂದ ಶಿವನಗರ ಇವರು ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುಗಳಿಗೆ ಗೌರವಾರ್ಪಣೆ ಗುರುಭ್ಯೋ ನಮನ ಕಾರ್ಯಕ್ರಮ ದ.ಕ.ಜಿ.ಪ.ಹಿ.ಪ್ರಾಥಮಿಕ ಶಾಲೆ ಪಾಂಡೇಶ್ವರ ಇಲ್ಲಿ ಜರಗಿತು. ಸಭೆಯ ಅದ್ಯಕ್ಷತೆ ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಎ ಸದಾಶಿವ ಕುಲಾಲ್. ಇವರು ವಹಿಸಿದರು. ಮುಖ್ಯ ಅಥಿತಿಗಳಾಗಿ ಫೋರ್ಟ್ ವಾರ್ಡ್ ಕಾರ್ಪೊರೇಟ್‌ರ್ ಶ್ರೀ ಅಬ್ದುಲ್ ಲತೀಫ್,ಮತ್ಸ್ಯ ಉದ್ಯಮಿ ಶ್ರೀ ಸಂದೀಪ್ ಉಳ್ಳಾಲ,ಸಮಾಜ ಸೇವಕರು, ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಸದಾಶಿವ ಪಾಂಡೇಶ್ವರ,ಶ್ರೀ ಮುನೀರ್ ಮುಕ್ಕಚೇರಿ,ಸಿಂಡಿಕೇಟ್ ಬ್ಯಾಂಕ್ ಇದರ ನಿವೃತ್ತ ಅಧಿಕಾರಿ ಶ್ರೀ ಕೆ.ಎಸ್.ಯಶವಂತ್ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶಾಲಿನಿ ಎಚ್.ಕೆ ಉಪಸ್ಥಿತಿ ಇದ್ದರು. ಬಳಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಸೂರ್ಯನಾರಾಯಣ್ ರಾವ್,ಶ್ರೀ ಟಿ.ಕೃಷ್ಣ ನಾಯ್ಕ್,ಶ್ರೀಮತಿ ಸೆಲೆಸ್ಟಿನ್ ಡಿ ಸೋಜ,ಶ್ರೀಮತಿ ಪುಪ್ಪ.ಕೆ,ಶ್ರೀಮತಿ ಲಿಡಿವಿನ್ ಲೋಬೊ,ಶ್ರೀಮತಿ ಪುಪ್ಪ.ಎ,ಶ್ರೀಮತಿ ಕಸ್ತೂರಿ ಇವರನ್ನು ಗೌರವ ಪೂರಕವಾಗಿ ಸನ್ಮಾನ ಮಾಡಲಾಯಿತು. ಅದೇ ಶಾಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿ ಇರುವ ಶ್ರೀಮತಿ ಶಾಲಿನಿ.ಎಚ್.ಕೆ,ಶ್ರೀಮತಿ ವೀಣಾ. ಜೆ.ಬಿ,ಶ್ರೀಮತಿ ಸಾವಿತ್ರಿ. ಎಚ್.ಆರ್,ಶ್ರೀಮತಿ ತೇಜಶ್ರೀ.ಪಿ,ಶ್ರೀಮತಿ ದಿವ್ಯ ಇವರನ್ನು ಗೌರವ ಪೂರಕವಾಗಿ ಅಭಿನಂದಿಸಲಾಯಿತು.ಶ್ರೀಮತಿ ವೀಣಾ ಜೆ.ಬಿ ಪ್ರಾರ್ಥನೆ ಮಾಡಿದರು.ಶ್ರೀ ಪ್ರವೀಣ್ ಬಸ್ತಿ ಸ್ವಾಗತಿಸಿ ಧನ್ಯವಾದ ನೀಡಿ ಕಾರ್ಯಕ್ರಮವನ್ನು ನಿರೂಪಿಸಿದರೂ.