Home ಉಡುಪಿ ಉಡುಪಿ: ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತ್ಯು

ಉಡುಪಿ: ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತ್ಯು

0

ಉಡುಪಿ: ಕಂಟೇನರ್ ಲಾರಿಯಲ್ಲಿ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಲ್ಪೆಯ ತೊಟ್ಟಂನಲ್ಲಿ ಇಂದು ನಡೆದಿದೆ.


ಮೃತರನ್ನು ಒರಿಸ್ಸಾ ಮೂಲದ ಬಾಬುಲ್ಲ (38) ಹಾಗೂ ಭಾಸ್ಕರ್ (40) ಎಂದು ಗುರುತಿಸಲಾಗಿದೆ. ತೊಟ್ಟಂನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ಗ್ರಾನೈಟ್ ತರಲಾಗಿತ್ತು. ಕಂಟೇನರ್ ಲಾರಿಯಲ್ಲಿದ್ದ ಗ್ರಾನೈಟ್ ಇಳಿಸುವಾಗ ಆಕಸ್ಮಿಕವಾಗಿ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಜೀವ ರಕ್ಷಕ ಈಶ್ವರ್ ಮಲ್ಪೆ ತಂಡದವರು ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

LEAVE A REPLY

Please enter your comment!
Please enter your name here