Home ತಾಜಾ ಸುದ್ದಿ ಅಪ್ರಾಪ್ತ ಮಗನ ಕೈಯಲ್ಲಿ ಓಮ್ನಿ ಓಡಿಸಿದ ಅಪ್ಪನಿಗೆ 25 ಸಾವಿರ ದಂಡ..!

ಅಪ್ರಾಪ್ತ ಮಗನ ಕೈಯಲ್ಲಿ ಓಮ್ನಿ ಓಡಿಸಿದ ಅಪ್ಪನಿಗೆ 25 ಸಾವಿರ ದಂಡ..!

0

ಶಿವಮೊಗ್ಗ : ಅಪ್ರಾಪ್ತ ಬಾಲಕನೊಬ್ಬ ಡಿಎಲ್ ಇಲ್ಲದೆ ವಾಹನ ಚಲಾನಣೆ ಮಾಡಿದ್ದಕ್ಕೆ ಇದೀಗ ಬಾಲಕನ ಅಪ್ಪ 25 ಸಾವಿರ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ.


ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರದ ನಿವಾಸಿ ಇಲಿಯಾಸ್ (41) ದಂಡ ಪಾವತಿಸಬೇಕಾದವರು. ಇಲಿಯಾಸ್ ತಮ್ಮ 17 ವರ್ಷದ ಮಗನಿಗೆ ಓಮ್ನಿ ಕಾರನ್ನು ಚಲಾಯಿಸಲು ನೀಡಿದ್ದಾರೆ. ಈ ವೇಳೆ ಕರ್ನಾಟಕ ಸಂಘದ ಬಳಿಯ ಬಿ.ಎಚ್.ರಸ್ತೆಯಲ್ಲಿ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ಎಸ್.ಶಿವಣ್ಣನವರ್ ವಾಹನ ತಪಾಸಣೆ ನಡೆಸಿದ್ದು, ಒಮಿನಿ ವಾಹನವನ್ನು ಪರವಾನಗಿ ಇಲ್ಲದೇ ಬಾಲಕ ಓಡಿಸಿ ನಿಯಮ ಉಲ್ಲಂಘನೆ ಮಾಡಿರುವುದು ಗೊತ್ತಾಗಿದೆ.ಹೀಗಾಗಿ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿಕೊಂಡು ಚಾಲನೆಗೆ ಅರ್ಹತೆ ಹೊಂದಿರದ ಪುತ್ರನಿಗೆ ವಾಹನ ನೀಡಿದ್ದ ತಂದೆಯ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪ ವರದಿ ಸಲ್ಲಿಸಿದ್ದರು. ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here