ಉಡುಪಿ: ಕ್ಯೂ ಆರ್ ಕೋಡ್ ಬಳಸಿ ಗೂಗಲ್ ಪೇ ಮೂಲಕ ಖಾತೆಯಿಂದ ಹಣ ವರ್ಗಾಯಿಸಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಉಷಾ ಕಿರಣ್ ಎಂಬವರು ಆಗಸ್ಟ್ 27ರಂದು ಸೊತ್ತು ಮಾರಾಟದ ಬಗ್ಗೆ ಓಎಲ್‌ಎಕ್ಸ್‌ನಲ್ಲಿ ಮಾಹಿತಿ ಹಾಕಿದ್ದು ಮಹಿಳೆಯೊಬ್ಬರು ಕರೆ ಮಾಡಿ ತಾನು ಸೊತ್ತುಗಳನ್ನು ಖರೀದಿಸುವುದಾಗಿ ತಿಳಿಸಿ, ಉಷಾ ಕಿರಣ್ ಅವರ ಗೂಗಲ್ ಪೇ ನಂಬರನ್ನು ಪಡೆದುಕೊಂಡಿದ್ದರು. ಬಳಿಕ ಉಷಾ ಕಿರಣ್ ಅವರ ಮೊಬೈಲ್‌ಗೆ ತುಂಬಾ ಕ್ಯೂ ಕೋಡ್‌ಗಳು ಬಂದಿದ್ದು ಇದನ್ನು ತೆರೆದು ನೋಡಿದಾಗ ಉಷಾ ಕಿರಣ್ ಅವರ ಗೂಗಲ್ ಪೇ ಆಪ್ ತೆರೆದುಕೊಂಡಿತು. ಇದರಿಂದ ಆಗಸ್ಟ್ 27 ಮತ್ತು 28ರಂದು ಇವರ ಮೂರು ಬ್ಯಾಂಕ್ ಖಾತೆಗಳಿಂದ ಒಟ್ಟು 1,28,496ರೂ. ಹಣ ಬೇರೆ ಖಾತೆಗೆ ವರ್ಗಾವಣೆ ಆಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.