ಶನಿವಾರ ತಡರಾತ್ರಿ ಎನ್‌ಟಿಆರ್ ಜಿಲ್ಲೆಯ ಸಮೀಪ ಆಂಧ್ರಪ್ರದೇಶ-ತೆಲಂಗಾಣ ಗಡಿಯಲ್ಲಿ ಜನಸೇನಾ ಪಕ್ಷದ (ಜೆಎಸ್‌ಪಿ) ಅಧ್ಯಕ್ಷ ಪವನ್ ಕಲ್ಯಾಣ್ ಅವರ ಬೆಂಗಾವಲು ವಾಹನವನ್ನು ಪೊಲೀಸರು ತಡೆದ ನಂತರ ಹೈ ಡ್ರಾಮಾಕ್ಕೆ ಸಾಕ್ಷಿಯಾಯಿತು.
ಪವನ್ ಕಲ್ಯಾಣ್ ವಿಜಯವಾಡಕ್ಕೆ ತೆರಳುತ್ತಿದ್ದಾಗ ಗರಿಕಪಾಡು ಚೆಕ್‌ಪೋಸ್ಟ್‌ನಲ್ಲಿ ಅವರ ಬೆಂಗಾವಲು ಪಡೆಯನ್ನು ಪೊಲೀಸರು ತಡೆದರು.
ಇದಾದ ಕೂಡಲೇ ವಾಹನದಿಂದ ಹೊರಬಂದು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರು.
#WATCH | Jan Sena party workers obstructed the road after the party chief Pawan Kalyan's convoy of vehicles was blocked by the Andhra Pradesh police in the NTR district. (09.09)
— ANI (@ANI) September 9, 2023
(Source: Jan Sena party) pic.twitter.com/z5jziGRyqD
ಹೆಚ್ಚಿನ ಸಂಖ್ಯೆಯಲ್ಲಿ ಜೆಎಸ್‌ಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಜೆಎಸ್‌ಪಿ ಕಾರ್ಯಕರ್ತರ ನಡುವೆ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಜೆಎಸ್‌ಪಿ ನಾಯಕ ನಾದೆಂಡ್ಲಾ ಮನೋಹರ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇದರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶಕ್ಕೆ ಪ್ರವೇಶಿಸಲು ಯಾವುದೇ ವೀಸಾ ಅಥವಾ ಪಾಸ್‌ಪೋರ್ಟ್ ಅಗತ್ಯವಿದೆಯೇ ಎಂದು ಕೇಳುವುದನ್ನು ಕಾಣಬಹುದು.