ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಜಿಲ್ಲೆಯ ಗ್ರಾಮ ಪಂಚಾಯತ್ ಗಳ ನೂತನ ಅದ್ಯಕ್ಷ/ಉಪಾದ್ಯಕ್ಷರುಗಳಿಗೆ ಅಭಿನಂದನಾ ಸಮಾರಂಭ ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಜಿಲ್ಲಾ ಕಛೇರಿಯಲ್ಲಿ ಸಂಘಟಿಸುವ ಮೂಲಕ ಯಶಸ್ವಿಯಾಗಿ ನಡೆಯಿತು.
ದ.ಕನ್ನಡ ಜಿಲ್ಲೆಯ ಕಾಂಗ್ರೆಸ್ ಬೆಂಬಲಿತ ಅದ್ಯಕ್ಷ ಉಪಾಧ್ಯಕ್ಷರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ, ಜಿಲ್ಲಾದ್ಯಕ್ಷರೂ, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ವಿಧಾನ ಪರಿಷತ್ ಶಾಸಕಾರದ ಮಂಜುನಾಥ ಭಂಡಾರಿ ಅವರ ಮಾರ್ಗದರ್ಶನದಲ್ಲಿ ಗ್ರಾ.ಪಂಚಾಯತ್ ಅದ್ಯಕ್ಷ/ ಉಪಾದ್ಯಕ್ಷರುಗಳಿಗೆ ಗೌರವ ಸಮರ್ಪನೆ ಮಾಡಲಾಯಿತು.ಸಭೆಯನ್ನು ಉದ್ದೇಶಿಸಿ ಪ್ರಸ್ತಾವಿಕವಾಗಿ ಮಾತಾಡಿದ ಕಾರ್ಯಕ್ರಮದ ಯಶಸ್ವಿ ಸಂಘಟಕ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತಾಡಿ ಕಾರ್ಯಕ್ರಮದ ಉದ್ದೇಶವನ್ನು ಸಭೆಗೆ ಮುಂದಿನ ತಿಂಗಳು ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಉಪಸ್ಥಿತಿಯಲ್ಲಿ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಮುಂದಿನ ಬಾಗವಾಗಿ ಶಾಸಕರಾದ ಮಂಜುನಾಥ ಭಂಡಾರಿಯವರ ಸೂಚನೆಯಂತೆ ಭಾಗವಹಿಸಿದ ಜಿಲ್ಲೆಯ ವಿವಿಧ ಬ್ಲಾಕ್ ನಿಂದ ಆಗಮಿಸಿದ ಪಂಚಾಯತ್ ರಾಜ್ ಸದಸ್ಯರೊಂದಿಗಿನ ಸಂವಾದ ಕಾರ್ಯಕ್ರಮ ಗ್ರಾ.ಪಂಚಾಯತ್ ಗೆ ಸಂಬಂಧಪಟ್ಟ ಹಲವಾರು ವಿಚಾರಗಳು ಬಹಳ ಉತ್ತಮವಾಗಿ ನಡೆಯಿತು.ಸಂವಾದದ ನಂತರ ಮಾತಾಡಿದ ಮಂಜುನಾಥ ಭಂಡಾರಿ ಸದಸ್ಯರುಗಳ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದೆಂದು ತಿಳಿಸಿದರು.ನಂತರ ಶಾಸಕರಾದ ಹರೀಶ್ ಕುಮಾರ್ ಮಾಜಿ ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಮಮತಾ ಗಟ್ಟಿ,ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ.ಎಸ್.ಮಹಮ್ಮದ್ ಮಾತಾಡಿ ಸುಭಾಶ್ಚಂದ್ರ ಶೆಟ್ಟಿಯವರು ಮೊದಲ ಬಾರಿಗೆ ಸಂಘಟಿಸಿ ನಮಗೆಲ್ಲ ಮಾದರಿಯಾಗಿದ್ದಾರೆ ಇದರ ಯಶಸ್ವಿ ಅವರಿಗೆ ಸಲ್ಲಬೇಕು,ಇಂತಹ ಕಾರ್ಯಕ್ರಮಗಳಿಂದ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ಕೊಂಡಾಡಿದರು.ಜಿಲ್ಲೆಯಿಂದ 50 ಕ್ಕೂ ಹೆಚ್ಚು ಗ್ರಾ.ಪಂಚಾಯತ್ ಅದ್ಯಕ್ಷ/ಉಪಾಧ್ಯಕ್ಷರನ್ನು ಸ್ಮರಣಿಕೆ ನೀಡಿ ಶಾಲುಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಪ್ರದಾನ ಕಾರ್ಯದರ್ಶಿ ಪದ್ಮರಾಜ್,ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅದ್ಯಕ್ಷರಾದ ಕೆ.ಕೆ.ಶಾಹುಲ್ ಹಮೀದ್,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಡಿ.ಎಸ್.ಮಮತಾ ಘಟ್ಟಿ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್,ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾದ್ಯಕ್ಷರಾದ ಅಬ್ಬಾಸ್ ಅಲಿ,ಜಿಲ್ಲಾ ಪ್ರದಾನ ಕಾರ್ಯದರ್ಶಿ ಶುಭೋದಯ ಆಳ್ವ,ದ.ಕನ್ನಡ ಸೇವಾದಳ ಅದ್ಯಕ್ಷರಾದ ಜೋಕಿಂ.ಡಿ.ಸೋಜಾ,ಸುರೇಂದ್ರ ಕಾಂಬ್ಳಿ,ನಾಗೇಶ್ ಕುಮಾರ್,ಸತೀಶ್ ಕಾಶಿಪಟ್ನ,ಸುದೀಪ್ ಕುಮಾರ್ ಶೆಟ್ಟಿ ಮಾಣಿ,ಅಶ್ವಿನ್ ರಾಜ್,ಸಂದೇಶ್ ಶೆಟ್ಟಿ ಬಿಕ್ನಾಜೆ,ವಿಶ್ವಾಸ್ ಶೆಟ್ಟಿ, ಯಶವಂತ ಗುರುಪುರ, ರೇಖಾ ಶೆಟ್ಟಿ ಮುಲ್ಕಿ,ಲೀಲಾ ಮನಮೋಹನ್ ಸುಳ್ಯ, ಜಯಪ್ರಕಾಶ್ ಸುಳ್ಯ,ಗಂಗಾಧರ ಕಡಬ,ಪದ್ಮನಾಭ ಪೂಜಾರಿ,ನೀರಜ್ ಚಂದ್ರಪಾಲ್ ,ನಝೀರ್ ಬಜಾಲ್,ಗಣೇಶ್ ಪೂಜಾರಿ,ವಿಕಾಶ್ ಶೆಟ್ಟಿ, ಮಲ್ಲಿಕಾ ಪಕ್ಕಳ,ಶಾಂತಲ ಗಟ್ಟಿ,ಪಂಚಾಯತ್ ರಾಜ್ ಸಂಘಟನೆಯ ಬ್ಲಾಕ್ ಅದ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು
ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪ್ರದಾನಕಾರ್ಯದರ್ಶಿ ಜಗದೀಶ್ ಕೊಯಿಲ ಸ್ವಾಗತಿಸಿ ಸಂತೋಷ್ ಕುಮಾರ್ ಭಂಡಾರಿ ಪುತ್ತೂರು ವಂದಿಸಿದರು.ಇರಾ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ಅಬ್ದುಲ್ ರಜಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು…