ಬೆಂಗಳೂರು : ಚಿಕ್ಕಮಗಳೂರಿನಲ್ಲಿ ನಡೆದ ಹಿಟ್ ರನ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಹಾಸ್ಯನಟ ಚಂದ್ರಪ್ರಭಾ ತಪ್ಪು ಒಪ್ಪಿಕೊಂಡಿದ್ದಾರೆ. ಈ ಮೊದಲು ಬೈಕ್ ಸವಾರನೇ ಮದ್ಯಪಾನ ಮಾಡಿದ್ದನು, ನನ್ನದು ಯಾವುದೇ ತಪ್ಪು ಇಲ್ಲ ಎಂದು ಹೇಳಿಕೆ ನೀಡಿದ್ದರು.
ಆದರೀಗ ಚಿಕ್ಕಮಗಳೂರು ಸಂಚಾರಿ ಠಾಣೆಗೆ ಹಾಜರಾದ ನಟ ಚಂದ್ರಪ್ರಭಾ ತಪ್ಪು ಒಪ್ಪಿಕೊಂಡಿದ್ದಾರೆ.
ಬೈಕ್ ಸವಾರ ಮದ್ಯಪಾನ ಮಾಡಿರಲಿಲ್ಲ. ನಾನು ತಪ್ಪು ಮಾಡಿದ್ದೇನೆ, ನನಗೆ ಭಯವಾಯಿತು ಅದಕ್ಕೆ ಹಾಗೆ ಹೇಳಿದೆ. ನಾನು ಮತ್ತು ನನ್ನ ಸ್ನೇಹಿತ ಆಸ್ಪತ್ರೆಯವರೆಗೆ ಹೋಗಿದ್ದೆವು. ಆದರೆ ಆಸ್ಪತ್ರೆಗೆ ಸೇರಿಸಲಿಲ್ಲ, ನಾನು ಬಡವ.ನನ್ನದು ತಪ್ಪಾಯ್ತು..ಗಾಯಾಳು ಚಿಕಿತ್ಸೆಗೆ ನನ್ನ ಕೈಲಾದಷ್ಟು ಸಹಾಯ ಮಾಡುವೆ ಎಂದು ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಮಾಲ್ತೇಶ್ ಎಂಬ ಬೈಕ್ ಸವಾರನಿಗೆ ಚಂದ್ರಪ್ರಭಾ ಕಾರು ಡಿಕ್ಕಿ ಹೊಡೆದಿತ್ತು, ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಂದ್ರಪ್ರಭಾ ಅವರು ಹಿಟ್ & ರನ್ ಮಾಡಿ ಪರಾರಿ ಆಗಿದ್ದರು. ಈ ಹಿನ್ನೆಲೆ ಠಾಣೆಗೆ ಬರುವಂತೆ ಪೊಲೀಸರು ಚಂದ್ರಪ್ರಭಾಗೆ ಸೂಚನೆ ನೀಡಿದ್ದರು. ಅಂತೆಯೇ ಇಂದು ನಟ ಚಿಕ್ಕಮಗಳೂರು ನಗರ ಸಂಚಾರಿ ಠಾಣೆಗೆ ಹಾಜರಾಗಿದ್ದಾರೆ.