Home ಕರಾವಳಿ ಮಂಗಳೂರು: 13 ರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..!

ಮಂಗಳೂರು: 13 ರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..!

0

ಮಂಗಳೂರು: ಕಳೆದ ಹದಿಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಜಪ್ಪಿನಮೊಗರು ನಿವಾಸಿ ಪ್ರೀತಮ್ ಆಚಾರ್ಯ(38) ಬಂಧಿತ ಆರೋಪಿ. ಪ್ರೀತಮ್ ಆಚಾರ್ಯ ಪ್ರಕರಣವೊಂದರಲ್ಲಿ ಭಾಗಿಯಾಗಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದಿದ್ದರಿಂದ ಈತನ ಮೇಲೆ ಎಲ್.ಪಿ.ಸಿ ವಾರೆಂಟ್ ಜ್ಯಾರಿಯಾಗಿತ್ತು. ಅದರಂತೆ ಈತನು ಮುಂಬಯಿಯ ಬೌಚ ದಕ್ಕ ಹೊಟೇಲ್ ನಲ್ಲಿ ಮ್ಯಾನೇಜರ್ ಆಗಿ ಕೆಲಸದಲ್ಲಿದ್ದಾಗಿ ದೊರೆತ ಖಚಿತ ಮಾಹಿತಿಯಂತೆ ಉರ್ವ ಠಾಣೆಯ ಪೊಲೀಸರು ವಿಶೇಷ ಕರ್ತವ್ಯದಲ್ಲಿ ಮುಂಬೈಗೆ ತೆರಳಿ ಸೆಪ್ಟೆಂಬರ್ 3 ರಂದು ಮಧ್ಯಾಹ್ನ 11ಗಂಟೆಗೆ ಈತನು ಕೆಲಸ ಮಾಡುತ್ತಿದ್ದ ಹೊಟೇಲ್ ನಲ್ಲಿ ವಶಕ್ಕೆ ಪಡೆದಿದ್ದಾರೆ. ನವೆಂಬರ್ ಸೆಪ್ಟೆಂಬರ್ 4ರಂದು ಬೆಳಗ್ಗೆ 11ಗಂಟೆಗೆ ಉರ್ವ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.


LEAVE A REPLY

Please enter your comment!
Please enter your name here