Home ಕರಾವಳಿ ಮಂಗಳೂರು: ಚೂರಿ ಇರಿತ ಪ್ರಕರಣ -ಮೂವರು ಆರೋಪಿಗಳು ಅರೆಸ್ಟ್

ಮಂಗಳೂರು: ಚೂರಿ ಇರಿತ ಪ್ರಕರಣ -ಮೂವರು ಆರೋಪಿಗಳು ಅರೆಸ್ಟ್

0

ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಸಿದಂತೆ ಮೂವರು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಬಂಧಿತರನ್ನು ಕಳವಾರು ನಿವಾಸಿಗಳಾದ ಪ್ರಶಾಂತ್ (28), ಧನರಾಜ್ (23) ಮತ್ತು ಯಜ್ಞೆಶ್ (22) ಎಂದು ಗುರುತಿಸಲಾಗಿದ್ದು, ಸುರತ್ಕಲ್ ಠಾಣೆ ವ್ಯಾಪ್ತಿಯ ಕಳವಾರಿನಲ್ಲಿ ನಿನ್ನೆ ರಾತ್ರಿ ಶಾಂತಿಗುಡ್ಡೆ ನಿವಾಸಿ ಅಬ್ದುಲ್ ಸಫ್ವಾನ್‌ (23) ಎಂಬಾತನಿಗೆ ಚೂರಿ ಇರಿತ ಆಗಿತ್ತು, ಕೂಡಲೇ ಸುರತ್ಕಲ್ ಠಾಣೆ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ನಡೆಸಿದ್ದಾರೆ. ‌ಹಲವರನ್ನು ವಶಕ್ಕೆ ಪಡೆದಿದ್ದು ಮೂವರನ್ನು ಬಂಧಿಸಿದ್ದಾಗಿ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದಾರೆ.

ಆಗಸ್ಟ್ 31ರಂದು ನಡೆದ ಗಲಾಟೆ ಬಗ್ಗೆ ಮಾತುಕತೆಗೆಂದು ಇಬ್ಬರನ್ನು ಕರೆದಿದ್ದು ಅಬ್ದುಲ್ ಸಫ್ವಾನ್ ಮತ್ತು ಮೊಹಮ್ಮದ್ ಸಫ್ವಾನ್ ಬೈಕಿನಲ್ಲಿ ಬರುತ್ತಿದ್ದಾಗಲೇ ಎರಡು ಬೈಕ್ ಗಳಲ್ಲಿ ಬಂದಿದ್ದ ಐದಾರು ಮಂದಿ ತಡೆದು ಹಲ್ಲೆ ನಡೆಸಿದ್ದರು‌‌. ಅಬ್ದುಲ್ ಸಫ್ವಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಬಳಿಕ ಸ್ಥಳದಲ್ಲಿ ಜನ ಸೇರುತ್ತಿದ್ದಾಗ ಆರೋಪಿಗಳು ಪರಾರಿಯಾಗಿದ್ದರು. ಸಫ್ವಾನ್‌ ಅವರ ಕೈ , ತೋಳು ಹಾಗೂ ಬೆನ್ನಿಗೆ ಚೂರಿಯಿಂದ ಇರಿದ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here