ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮರುತನಿಖೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಮಂಗಳೂರು ಆದಿಚುಂಚನಗಿರಿ ಶಾಖಾಮಠದ ಧರ್ಮಪಾಲನಾಥ ಸ್ವಾಮೀಜಿ, ಸತ್ಯ, ನ್ಯಾಯ, ಧರ್ಮನಿಷ್ಠೆಯ ಪರ ಆದಿಚುಂಚನಗಿರಿ ಮಠ ಇದೆ. ಸಂತೋಷ್ ರಾವ್ ಆರೋಪಿ ಅಲ್ಲ ಎಂದರೆ ಆರೋಪಿ ಎಂದರೇ ನೈಜ ಆರೋಪಿ ಯಾರು ಎಂಬ ಪ್ರಶ್ನೆ ಎಲ್ಲರ ಮನದಲ್ಲಿದೆ. ಈ ನಿಟ್ಟಿನಲ್ಲಿ ಮರುತನಿಖೆ ಆಗಲೇಬೇಕಿದೆ. ಈ ಪ್ರಕರಣದ ಮೊದಲ ತನಿಖಾಧಿಕಾರಿ, ಪೋಸ್ಟ್ ಮಾರ್ಟಂ ಮಾಡಿದ ವೈದ್ಯನ ಮಂಪರು ಪರೀಕ್ಷೆ ನಡೆಸಬೇಕಿದೆ.



ಅಲ್ಲದೆ ಕುಸುಮಾವತಿ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದರು. ಕಳೆದ 11 ವರ್ಷಗಳಿಂದ ಈ ಕುರಿತು ಹೋರಾಟ ನಡೆಸುತ್ತಿರುವ ತಿಮರೋಡಿ ಮಹೇಶ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೌಜನ್ಯ ಹೋರಾಟವೊಂದಕ್ಕೆ ಮಹಾನ್ ಶಕ್ತಿಯಾಗಿ ಕಾಳಿ ದೇವಿ ರೂಪ ಪಡೆದಿದ್ದಾಳೆ ಎಂದರು. ಒಡನಾಡಿ ಸಂಸ್ಥೆ ವಕೀಲ ವಕೀಲ ಶ್ರೀನಿವಾಸ್ ಮಾತನಾಡಿ ಈ ಹಿಂದೆ ತನಿಖೆ ದಾರಿ ತಪ್ಪಿಸಿದ್ದರು. ಈಗ ಹೋರಾಟದ ಹಾದಿ ತಪ್ಪಿಸುತ್ತಿದ್ದಾರೆ. ಕುಸುಮಾವತಿ ಅವರನ್ನು ಪ್ರತಿಭಟನಾ ವೇದಿಕೆ ಏರಲು ಯಾವ ರೀತಿ ನ್ಯಾಯ ಕೊಡುಸುತ್ತೀರಿ ಎಂದು ಪ್ರಶ್ನಿಸಿದರು.

