ಹೈದರಾಬಾದ್: ಸೂರ್ಯ ಗ್ರಹದ ಬಗ್ಗೆ ಅಧ್ಯಯನ ಮಾಡಲು ಆದಿತ್ಯ- L 1 ಮಿಷನ್ ರಾಕೆಟ್ ಈಗಷ್ಟೇ ಸೂರ್ಯ ಗ್ರಹದ ಕಡೆಗೆ ಹಾರಿದೆ. ಆದಿತ್ಯ- L 1 ಮಿಷನ್ ರಾಕೆಟ್ ಸೂರ್ಯನೆಡೆಗೆ ಪ್ರಯಾಣ ಬೆಳೆಸುತ್ತಲೇ ಇಸ್ರೋ ವಿಜ್ಞಾನಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ಪರಸ್ಪರರನ್ನು ಅಭಿನಂದಿಸಿದ್ದಾರೆ. ಜಗತ್ತಿಗೇ ಬೆಳಕು ಮತ್ತು ಶಕ್ತಿ ಕೊಡುವ ಸೂರ್ಯನಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ನಡೆಯುವಂಥ ಪ್ರಕ್ರಿಯೆಗಳು ಏನು? ಸೂರ್ಯನ ಶಾಖ, ಬೆಳಕು ಉಂಟಾಗಲು ಅದರ ಹಿಂದಿನ ರಾಸಾಯನಿಕ ಕ್ರಿಯೆ ಎಂಥದು? ಸೂರ್ಯನ ಜಾಜ್ವಲ್ಯತೆಗೆ ಕಾರಣವಾದ ಹೀಲಿಯಂ ಉತ್ಪಾದನೆಯ ಮೂಲ ಧಾತುವಿನ ಕಣಗಳೆಂಥವು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ತಕ್ಕ ಉತ್ತರ ಕಂಡುಕೊಳ್ಳುವ ಒಂದು ಪ್ರಯೋಗಾತ್ಮಕ ಯತ್ನ ಇದಾಗಿದೆ. ಚಂದ್ರಯಾನ-3 ಯಶಸ್ಸಿನಂತೆ ಈ ಯೋಜನೆ ಕೂಡ ಯಶಸ್ಸು ಕಾಣಲಿ ಎಂಬುದು ಸಮಸ್ತ ಭಾರತೀಯರ ಆಶಯವಾಗಿದೆ.