Home ಕರಾವಳಿ ಫುಟ್ ಬೋರ್ಡ್ ಪ್ರಯಾಣ- ಮಂಗಳೂರಿನಲ್ಲಿ ಪೊಲೀಸರ ಅಭಿಯಾನ- 123 ಕೇಸ್ ದಾಖಲು

ಫುಟ್ ಬೋರ್ಡ್ ಪ್ರಯಾಣ- ಮಂಗಳೂರಿನಲ್ಲಿ ಪೊಲೀಸರ ಅಭಿಯಾನ- 123 ಕೇಸ್ ದಾಖಲು

0

ಮಂಗಳೂರು: ಬಸ್ ಕಂಡಕ್ಟರ್ ಒಬ್ಬರು ಏಕಾಏಕಿ ಬಸ್ ನಿಂದ ಹೊರ ಬಿದ್ದು ಸಾವನ್ನಪ್ಪಿದ್ದ ಬೆನ್ನಲ್ಲೇ ಗುರುವಾರ ಪೊಲೀಸರು ಬಸ್‌ಗಳ ವಿರುದ್ಧ ವಿಶೇಷ ಅಭಿಯಾನ ನಡೆಸಿ ಫುಟ್‌ಬೋರ್ಡ್ ಪ್ರಯಾಣದ 123 ಪ್ರಕರಣಗಳನ್ನು ದಾಖಲಿಸಿದ್ದಾರೆ.


ಮತ್ತೊಂದು ಸುತ್ತಿನ ಸಭೆಯಲ್ಲಿ ಬಸ್ ನಿರ್ವಾಹಕರು ಬಾಗಿಲು ಇಲ್ಲದ ಫುಟ್‌ಬೋರ್ಡ್‌ನಲ್ಲಿ ನಿಂತಿರುವುದು ಕಂಡುಬಂದರೆ ಬಸ್ ಚಲಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಗೃತಿಯಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೆ ಬಾಗಿಲು ಹೊಂದಿರುವ ಬಸ್‌ಗಳು ಇನ್ನೂ ಕಟ್ಟುನಿಟ್ಟಾಗಿ ಬಾಗಿಲುಗಳನ್ನು ಅಳವಡಿಸಿಕೊಳ್ಳಬೇಕು. ಬಾಗಿಲು ಹೊಂದಿರದ ಹಳೆಯ ಸಿಟಿ ಬಸ್‌ಗಳು ಫುಟ್‌ಬೋರ್ಡ್ ಖಾಲಿಯಾಗುವ ವರೆಗೆ ಬಸ್ ಚಾಲನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ನಂತೂರು ಸರ್ಕಲ್ ಬಳಿ ಬುಧವಾರ ಬಸ್ ನ ಫುಟ್ ಬೋರ್ಡ್ ನಲ್ಲಿದ್ದ ಈರಯ್ಯ(ಗುರು) ಎನ್ನುವ 23 ವರ್ಷದ ಕಂಡಕ್ಟರ್ ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here