Home ತಾಜಾ ಸುದ್ದಿ ಮಟನ್ ಬದಲಿಗೆ ದನದ ಮಾಂಸವನ್ನು ಗ್ರಾಹಕರಿಗೆ ನೀಡುತ್ತಿದ್ದ ಆರೋಪ : ಇಬ್ಬರು ಹೋಟೆಲ್ ಮಾಲೀಕರ ಬಂಧನ

ಮಟನ್ ಬದಲಿಗೆ ದನದ ಮಾಂಸವನ್ನು ಗ್ರಾಹಕರಿಗೆ ನೀಡುತ್ತಿದ್ದ ಆರೋಪ : ಇಬ್ಬರು ಹೋಟೆಲ್ ಮಾಲೀಕರ ಬಂಧನ

0

ಚಿಕ್ಕಮಗಳೂರು:ತಮ್ಮ ಹೋಟೆಲ್‌ಗಳಲ್ಲಿ ಮಟನ್ ಬದಲಿಗೆ ದನದ ಮಾಂಸವನ್ನು ಗ್ರಾಹಕರಿಗೆ ನೀಡುತ್ತಿದ್ದ ಆರೋಪದ ಮೇಲೆ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಹೋಟೆಲ್ ಮಾಲೀಕರನ್ನು ಬುಧವಾರ ಬಂಧಿಸಿದ್ದಾರೆ.


ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಂಧಿತರನ್ನು ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರು ಹೋಟೆಲ್ ಮಾಲೀಕ ಶಿವರಾಜ್ ಎಂದು ಗುರುತಿಸಲಾಗಿದೆ.

ಎವರೆಸ್ಟ್ ಮತ್ತು ಬೆಂಗಳೂರು ಎರಡೂ ಚಿಕ್ಕಮಗಳೂರು ನಗರದಲ್ಲಿ ಜನಪ್ರಿಯ ಹೋಟೆಲ್‌ಗಳಾಗಿವೆ. ಎರಡೂ ಹೋಟೆಲ್‌ಗಳು ಮಟನ್ ಭಕ್ಷ್ಯಗಳು ಎಂದು ಹೇಳಿಕೊಂಡು ಗೋಮಾಂಸದ ವಿವಿಧ ಖಾದ್ಯಗಳನ್ನು ನೀಡುತ್ತಿದ್ದವು ಎಂದು ಆರೋಪಿಸಲಾಗಿದೆ. ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರು ದಾಳಿ ನಡೆಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಚಿಕ್ಕಮಗಳೂರಿನ ನ್ಯಾಮತ್ ಹೋಟೆಲ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20 ಕೆಜಿ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹೋಟೆಲ್ ಮಾಲೀಕ ಇರ್ಷಾದ್ ಅಹ್ಮದ್ ಎಂಬಾತನನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here