Home ಪ್ರಖರ ವಿಶೇಷ BREAKING : ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಮೇಲೆ ಫೈರಿಂಗ್ ಮಾಡಿದ ಗನ್ ಮ್ಯಾನ್

BREAKING : ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಮೇಲೆ ಫೈರಿಂಗ್ ಮಾಡಿದ ಗನ್ ಮ್ಯಾನ್

0

ಬೆಂಗಳೂರು : ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗನ್ ಮ್ಯಾನ್ ನಿಂದ ಮತ್ತೊಬ್ಬ ಗನ್ ಮ್ಯಾನ್ ಮೇಲೆ ಫೈರಿಂಗ್ ನಡೆಸಿರುವ ಘಟನೆ ಜಯನಗರದ ನಾಲ್ಕನೇ ಬ್ಲಾಕ್ನ ಪಿಜಿ ಒಂದರಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಗನ್ ಮ್ಯಾನ್ ಪ್ರಶಾಂತ್ ಸ್ನೇಹಿತನ ಮೇಲೆ ಫೈರಿಂಗ್ ಮಾಡಿದ್ದಾರೆ.ಅವರ ಸ್ನೇಹಿತ ಕೂಡ ಗನ್ ಮ್ಯಾನ್ ಆಗಿದ್ದು, ಅನೀಲ್ ಅನ್ನುವವರು ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಪ್ರಶಾಂತ್ ನಿರ್ಮಾಪಕ ಉಮಾಪತಿ ಗೌಡ ಅವರ ಸಹೋದರನ ಗನ್ ಮ್ಯಾನ್ ಎಂದು ಹೇಳಲಾಗುತ್ತಿದೆ.

ಆಗಸ್ಟ್ 27ರ ರಾತ್ರಿ 12 ಗಂಟೆಯಲ್ಲಿ ಪಿಜಿಯಲ್ಲಿ ಘಟನೆ ನಡೆದಿದೆ. ಪಿಜಿಯಲ್ಲಿ ಪ್ರಶಾಂತ್ ಹಾಗೂ ಅನಿಲ್ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಗನ್ ಮ್ಯಾನ್ ಪ್ರಶಾಂತಗೆ ಪತ್ನಿ ಫೋನ್ ಕರೆ ಮಾಡಿದ್ದಾರೆ.

ಫೋನ್ನಲ್ಲಿ ಪತ್ನಿ ಜೊತೆ ಜೋರಾಗಿ ಪ್ರಶಾಂತ್ ಮಾತನಾಡುತ್ತಿದ್ದರು, ಸ್ವಲ್ಪ ನಿಧಾನವಾಗಿ ಮಾತಾಡು ಎಂದಿದ್ದಕ್ಕೆ ಪ್ರಶಾಂತ್ ಅನಿಲ್ ಎನ್ನುವವರ ಮೇಲೆ ಫೈರಿಂಗ್ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಪಿಸ್ತೂಲ್ನಿಂದ ಪ್ರಶಾಂತ್ ಫೈರಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಈ ಘಟನೆ ಕುರಿತಂತೆ ತಿಲಕ್ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಪ್ರಶಾಂತನನ್ನು ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here