Home ಕರಾವಳಿ ಯಕ್ಷ ಸಿಂಚನ ಬಳಗ ಪುತ್ತೂರು ಅರ್ಪಿಸುವ ರಂಗ ಮಾಣಿಕ್ಯ ಸುಬ್ಬು ಸಂಟ್ಯಾರ್ ವಿರಚಿತ “ಅಜ್ಜನ ಪಜ್ಜೆ”...

ಯಕ್ಷ ಸಿಂಚನ ಬಳಗ ಪುತ್ತೂರು ಅರ್ಪಿಸುವ ರಂಗ ಮಾಣಿಕ್ಯ ಸುಬ್ಬು ಸಂಟ್ಯಾರ್ ವಿರಚಿತ “ಅಜ್ಜನ ಪಜ್ಜೆ” ಯಕ್ಷಗಾನದ 100 ರ ಸಂಭ್ರಮ

0

ಪುತ್ತೂರು: ಯಕ್ಷ ಸಿಂಚನ ಬಳಗ ಪುತ್ತೂರು ಅರ್ಪಿಸುವ ರಂಗ ಮಾಣಿಕ್ಯ ಸುಬ್ಬು ಸಂಟ್ಯಾರ್ ವಿರಚಿತ “ಅಜ್ಜನ ಪಜ್ಜೆ” ಯಕ್ಷಗಾನದ 100 ರ ಸಂಭ್ರಮ ಹಾಗೂ 10 ನೇ ವರ್ಷದ ವಾರ್ಷಿಕೋತ್ಸವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ವಹಿಸಿಕೊಂಡರು. ಯಕ್ಷ ಸಿಂಚನ ಬಳಗ ಪುತ್ತೂರು ಇದರ ಸಂಚಾಲಕರಾದ ಸುಬ್ಬು ಸಂಟ್ಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು.ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗದ ಹಿರಿಯ ಕಲಾವಿದರಾದ “ಅಭಿನವ ಕೋಟಿ” ಕೆ. ಎಚ್ ದಾಸಪ್ಪ ರೈ ಅವರಿಗೆ ಗೌರವ ಸನ್ಮಾನ ಜರುಗಿತು.

ಹಾಗೆಯೇ ರಂಗಭೂಮಿ ಹಾಗೂ ಚಿತ್ರನಟ ರಂಗ್ ದ ರಾಜೆ ಸುಂದರ್ ರೈ ಮಂದಾರ ಹಾಗೂ ಅವರ ಪತ್ನಿ ಶ್ರೀಮತಿ ಮಲ್ಲಿಕಾ ಎಸ್ ರೈ ಇವರಿಗೆ ದಂಪತಿ ಸನ್ಮಾನ ಜರುಗಿತು. ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಯನ್ನು ನ್ಯಾಯವಾದಿಗಳು ಹಾಗೂ ಸಾಹಿತಿಯಾದ ಶ್ರೀ ದುರ್ಗಾ ಪ್ರಸಾದ್ ರೈ ಕುಂಬ್ರ ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಜ್ ರೈ ಬಳಜ್ಜ, ಮೋಹನ್ ದಾಸ್ ರೈ ಕುಂಬ್ರ, ಸಂತೋಷ್ ರೈ ಕುಂಬ್ರ, ಶರತ್ ಆಳ್ವ ಕೂರೇಲು, ಜಗದೀಶ್ ಪೂಜಾರಿ ಕೂರೇಲು , ಎಸ್ ಎ ವರ್ಕಾಡಿ ಹಾಗೂ ಬಾಬು ರವರು ಭಾಗವಹಿಸಿದರು. ನಂತರ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಅರುವ ಕೊರಗಪ್ಪ ಶೆಟ್ಟಿ, ವಿಶೇಷ ಪಾತ್ರದಲ್ಲಿ ಸುಂದರ್ ರೈ ಮಂದಾರ, ರಾಧಾಕೃಷ್ಣ ನಾವಡ ಮದೂರು , ಉದಯ ಅಡ್ಯನಡ್ಕ, ಪೆರ್ಲ ಜಗನ್ನಾಥ್ ಶೆಟ್ಟಿ, ಜಗದೀಶ್ ಕನ್ಯಾನ,ಮಹೇಶ್ ಸಾಲ್ಯಾನ್, ಪ್ರವೀಣ್ ರಾಜ್ ಅರ್ಲಪದವು, ಜಯರಾಜ್ ಕಾಶಿಕಟ್ಟೆ, ಸೋಹನ್ ರೈ ಮತ್ತಿತರರು ಅಭಿನಯಿಸಿದರು.

LEAVE A REPLY

Please enter your comment!
Please enter your name here