Home ಕರಾವಳಿ ಮಂಗಳೂರು:ವಿದೇಶಿ, ಇ-ಸಿಗರೇಟ್ ಮಾರಾಟ ಪ್ರಕರಣ-ಅಂಗಡಿಗಳ ಲೈಸನ್ಸ್‌ ರದ್ದತಿಗೆ ಪಾಲಿಕೆಗೆ ಪತ್ರ

ಮಂಗಳೂರು:ವಿದೇಶಿ, ಇ-ಸಿಗರೇಟ್ ಮಾರಾಟ ಪ್ರಕರಣ-ಅಂಗಡಿಗಳ ಲೈಸನ್ಸ್‌ ರದ್ದತಿಗೆ ಪಾಲಿಕೆಗೆ ಪತ್ರ

0

ಮಂಗಳೂರು:ನಿಷೇಧಿಸಲ್ಪಟ್ಟಿರುವ ಇ-ಸಿಗರೇಟ್ ಮತ್ತು ಸರಕಾರದ ಎಚ್ಚರಿಕೆಯನ್ನು ಪ್ಯಾಕೆಟ್ ಮೇಲೆ ನಮೂದಿಸದ ವಿದೇಶಿ ಸಿಗರೇಟ್‌ಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ನಗರದ ಮೂರು ಅಂಗಡಿಗಳ ಟ್ರೇಡ್ ಲೈಸನ್ಸ್‌ ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪೊಲೀಸರು ಪತ್ರ ಬರೆದಿದ್ದಾರೆ. ಬರ್ಕೆ ಪೊಲೀಸರು ಆ. 21ರಂದು ಲಾಲ್‌ಬಾಗ್ ಸಾಯಿಬಿನ್ ಕಾಂಪ್ಲೆಕ್ಸ್‌ನ ಮೂರು ಅಂಗಡಿಗಳಿಗೆ ದಾಳಿ ನಡೆಸಿ ಸುಮಾರು 2.70 ಲಕ್ಷರೂ. ಮೌಲ್ಯದ ಇ-ಸಿಗರೇಟ್ ಮತ್ತು ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಗಳು ಈ ಹಿಂದೆ ಕೂಡ ಇದೇ ರೀತಿಯ ಕಾನೂನು ಬಾಹಿರ ವ್ಯವಹಾರ ನಡೆಸಿದ್ದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಪುನರಾವರ್ತಿತ ಪ್ರಕರಣ ಹಿನ್ನೆಲೆಯಲ್ಲಿ ಟ್ರೇಡ್ ಲೈಸನ್ಸ್‌ ರದ್ದತಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ


LEAVE A REPLY

Please enter your comment!
Please enter your name here