ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾ ದೊಡ್ಡ ಹಿಟ್ ಆಗುವುದರ ಜೊತೆ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ. ರಿಲೀಸ್ ಆದ 9 ದಿನದಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರ ʼಜೈಲರ್ʼ ಭಾರತದಲ್ಲಿ ಮಾತ್ರವಲ್ಲದೆ ವರ್ಲ್ಡ್ ವೈಡ್ ನಲ್ಲೂ ಜನರ ಮನವನ್ನು ಗೆಲ್ಲುತ್ತಿದೆ. ಸಿನಿಮಾ ಕಮಲ್ ಹಾಸನ್ ಅವರ ʼವಿಕ್ರಮ್ʼ ಸಿನಿಮಾದ ಸಾರ್ವಕಾಲಿಕ ದಾಖಲೆಯನ್ನು ಉಡೀಸ್ ಮಾಡಿದೆ. ವರ್ಲ್ಡ್ ವೈಡ್ 9 ದಿನದಲ್ಲಿ ʼಜೈಲರ್ʼ 448 ಕೋಟಿ ರೂ ಗಳಿಸಿದ್ದು, ಭಾನುವಾರ 500 ಕೋಟಿ ದಾಟುವ ಸಾಧ್ಯತೆಯಿದೆ. 448 ಕೋಟಿ ಗಳಿಸುವ ಮೂಲಕ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆಯ ಕಾಲಿವುಡ್ ಸಿನಿಮಾಗಳ ಸಾಲಿನಲ್ಲಿ ʼಜೈಲರ್ʼ ಮೂರನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ʼಜೈಲರ್ʼ 131 ಇದುವರೆಗೆ ಕೋಟಿ ರೂ.ಗಳಿಸಿದೆ. ಭಾನುವಾರ 150 ಕೋಟಿ ರೂ.ಯನ್ನು ದಾಟುವ ಸಾಧ್ಯತೆಯಿದೆ. ಒಂದು ವೇಳೆ ಇದು ಸಾಧ್ಯವಾದರೆ ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಚಿತ್ರ ಇದಾಗಲಿದೆ. ಒಂದು ವೇಳೆ ತಮಿಳುನಾಡಿನಲ್ಲಿ ಸಿನಿಮಾ ʼವಿಕ್ರಮ್ʼ ಕಲೆಕ್ಷನ್ ಮೀರಿಸಿದರೂ ʼಪೊನ್ನಿಯಿನ್ ಸೆಲ್ವನ್: ಭಾಗ 1ʼ ಸಿನಿಮಾದ ಕಲೆಕ್ಷನ್ ನ್ನು ತಮಿಳುನಾಡಿನಲ್ಲಿ ಮೀರಿಸುವುದು ಕಷ್ಟಸಾಧ್ಯ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: Salaar: ಕುಂದಾಪುರದ ಬಸ್ರೂರಿಗೆ ಸ್ಥಳಾಂತರವಾದ ʼಸಲಾರ್ʼ ಪೋಸ್ಟ್ ಪೊಡಕ್ಷನ್ ವರ್ಕ್ ತಮಿಳು ರಾಜ್ಯ ಮಾತ್ರವಲ್ಲದೆ, ಕೇರಳದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾವೆಂಬ ಹೆಗ್ಗಳಿಕೆಗೆ ʼಜೈಲರ್ʼ ಪಾತ್ರವಾಗಿದೆ. ಕರ್ನಾಟಕ, ತೆಲುಗು ರಾಜ್ಯಗಳಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ವಿದೇಶದಲ್ಲಿ ʼಜೈಲರ್ʼ ಅತೀ ಹೆಚ್ಚು ಕೆಲಕ್ಷನ್ ತಮಿಳು ಸಿನಿಮಾದ ಸಾಲಿನಲ್ಲಿ 3ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ ಅತಿ ಹೆಚ್ಚು ಹಣ ಗಳಿಸಿದ ಹತ್ತು ಕಾಲಿವುಡ್ ಚಲನಚಿತ್ರಗಳು ಈ ಕೆಳಗಿನಂತಿವೆ: 2.0: 665 ಕೋಟಿ ರೂ. ಪೊನ್ನಿಯಿನ್ ಸೆಲ್ವನ್: ಭಾಗ 1: 496 ಕೋಟಿ ರೂ. ಜೈಲರ್: 448 ಕೋಟಿ (9 ದಿನಗಳು) ರೂ. ವಿಕ್ರಮ್: 430 ಕೋಟಿ ರೂ. ಪೊನ್ನಿಯಿನ್ ಸೆಲ್ವನ್: ಭಾಗ 2: 346 ಕೋಟಿ ರೂ. ವಾರಿಸು: 304 ಕೋಟಿ ರೂ. ಬಿಗಿಲ್: 299 ಕೋಟಿ ರೂ. ಎಂದಿರನ್: 288 ಕೋಟಿ ರೂ. ಕಬಾಲಿ: 287 ಕೋಟಿ ರೂ. ಸರ್ಕಾರ್: 258 ಕೋಟಿ ರೂ. ʼಜೈಲರ್ʼ ಅಂತಿಮವಾಗಿ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಹೀಗೆ ಆದರೆ ವಿಶ್ವಾದ್ಯಂತ ಅತಿ ಹೆಚ್ಚು ಹಣ ಗಳಿಸಿದ 10 ಕಾಲಿವುಡ್ ಸಿನಿಮಾಗಳಲ್ಲಿ 2ನೇ ಸ್ಥಾನದಲ್ಲಿ ʼಜೈಲರ್ʼ ನಿಲ್ಲುತ್ತದೆ.


