Home ತಾಜಾ ಸುದ್ದಿ ಸಿತೇಶ್ ಸಿ ಗೋವಿಂದ್ ಅವರು ಬರೆದ “A Nutty Afair” ಪುಸ್ತಕ ಬಿಡುಗಡೆ

ಸಿತೇಶ್ ಸಿ ಗೋವಿಂದ್ ಅವರು ಬರೆದ “A Nutty Afair” ಪುಸ್ತಕ ಬಿಡುಗಡೆ

0

ಸಿತೇಶ್ ಸಿ ಗೋವಿಂದ್ ಅವರು ಬರೆದ ಹೊಸ ವಿನೂತನ ಪ್ರಯೋಗಾತ್ಮಕ ಸ್ರ್ಕೀನೆಲ್ಲಾ “A Nutty Afair” ಇದೀಗ ಬಿಡುಗಡೆಯಾಗಿದೆ.
ಕನ್ನಡ ಸಿನಿಮಾ ರಂಗದ ಖ್ಯಾತ ನಟ, ರಾಜ್ ಕುಮಾರ್ ಕುಟುಂಬದ ಶ್ರೀ ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಮಗ ಶ್ರೀ ಯುವ ರಾಜ್ ಕುಮಾರ್ ಈ ಪುಸ್ತಕವನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದರು.

ಸಿತೇಶ್ ಗೋವಿಂದ್ ಅವರು ಒಬ್ಬ ಸಿನಿಮಾ ನಿರ್ದೇಶಕರಾಗಿದ್ದು, ಜೊತೆಗೆ ಕತೆ, ಚಿತ್ರಕತೆ, ಸಂಭಾಷಣೆಗಳನ್ನು ಬರೆಯುವವರಾಗಿದ್ದಾರೆ. ಜೊತೆಗೆ Creative Directior ದೇಶ ವಿದೇಶಗಳ ಜಾಹಿರಾತುಗಳನ್ನು ಮಾಡುತ್ತಾ ಕ್ರೀಯಾಶೀಲ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಚೊಚ್ಚಲ ನಿರ್ದೇಶನದ “ಇದು ಎಂಥಾ ಲೋಕವಯ್ಯಾ” ಎಂಬ ಕನ್ನಡ ಸಿನಿಮಾ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ (BIFFS 2022)ಆಯ್ಕೆಯಾಗಿತ್ತು. “A Nutty Affair” ಇದೊಂದು ಹೊಸ ಪ್ರಯೋಗವಾಗಿದ್ದು, ಮೊದಲ ಬಾರಿಗೆ ಸ್ಕ್ರೀನೆಲ್ಲಾ ಎಂಬ ಪದ ಪ್ರಯೋಗದಿಂದ ಹೊರಹೊಮ್ಮಿದೆ. ತಮ್ಮ ವಿನೂತನ ಶೈಲಿಯ ಕತೆ ಹೇಳುವ ರೀತಿಯಿಂದ ಹೆಸರುವಾಸಿಯಾದ ಸಿತೇಶ್ ಗೋವಿಂದ್ ಅವರು ಇದನ್ನೊಂದು ಸಿನಿಮಾಟಿಕ್ ರೀತಿಯಲ್ಲಿ ಹೊರತಂದಿದ್ದಾರೆ. ಪ್ರಾರಂಭದಲ್ಲೇ ನಕ್ಕು ಕಣ್ಣೀರು ತರಿಸುವ ಈ ಕತೆಯು ಕರ್ನಾಟಕದ ಕರಾವಳಿ ಭಾಗದಿಂದ ಕೇರಳದವರೆಗೂ ಮುಂದುವರೆಯುತ್ತದೆ. ತಮ್ಮ ಸಾಮಾಜಿಕ ಜೀವನದ ಒತ್ತಡಗಳನ್ನು ಭಯವನ್ನು ಹೃದಯಸ್ಪರ್ಶಿಯಾಗಿ ಅನಾವರಣಗೊಳಿಸಿರುವ ಈ ಪುಸ್ತಕವು ಓದುಗರನ್ನು ಇನ್ನಿಲ್ಲದಂತೆ ಆಕರ್ಷಿಸುವುದರಲ್ಲಿ ಸಂಶಯವಿಲ್ಲ.


“ಸ್ಕ್ರೀನೆಲ್ಲಾ” ಅನ್ನುವ ಪದವನ್ನು ಲೇಖಕರು ಈಯೊಂದು ವಿಶೇಷ ಪುಸ್ತಕಕ್ಕಾಗಿಯೇ ಸೃಷ್ಟಿಸಿದ ಪದವಾಗಿದೆ. ಓದುಗರಿಗೆ ಸಿನಿಮಾ ಶೈಲಿಯಲ್ಲಿ ಅನುಭವ ಕೊಡುವ, ಪರದೆ ಮತ್ತು ಕಾದಂಬರಿಯ ಸಮ್ಮಿಲನವಾಗಿದೆ. ಸಿತೇಶ್ ಅವರ ಅಸಾಧಾರಣ ಪ್ರತಿಭಾ ಪ್ರಯತ್ನದಿಂದ ಅವರ ವೃತ್ತಿ ಜೀವನದಲ್ಲಿ ಹಲವು ಪ್ರಥಮಗಳ ಜೊತೆಗೆ ಇದೂ ಕೂಡಾ ಮತ್ತೊಂದು ಸೇರ್ಪಡೆಯಾಗಿದೆ.

ಇದೊಂದು ಅದ್ಭುತವಾದ ಲೋಕವನ್ನೇ ಎಲ್ಲಾ ವಯಸ್ಸಿನ ಓದುಗರ ಮುಂದೆ ತೆರೆದಿಡುತ್ತದೆ. ಇಲ್ಲಿ ಎಲ್ಲವೂ ಒಂದು ಸಿನಿಮಾ ನೋಡಿದ ಅನುಭವವನ್ನೇ ನೀಡುತ್ತದೆ. ಎದ್ದು ಕಾಣುವ ವಿವರಣೆಗಳು, ಸಾಹಿತ್ಯ, ಸಂಗೀತ, ಜೀವತುಂಬುವ ಕಥಾಪಾತ್ರಗಳೆಲ್ಲವೂ ಓದುಗರಿಗೆ ಓದುವ ಅನುಭವಕ್ಕಿಂತಲೂ ಹೆಚ್ಚಿನದ್ದಾಗಿ ನೋಡುವ ಮತ್ತು ಅನುಭವಿಸುವ ಅನುಭೂತಿಯನ್ನೇ ನೀಡುತ್ತದೆ.

ಅಮೆಜಾನ್, ಫ್ಲಿಪ್‌ಕಾರ್ಟ್, ನೋಷನ್ ಪ್ರೆಸ್ ಮತ್ತು ಕಿಂಡಲ್‌ನಂತಹ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗ ‘ಎ ನಟ್ಟಿ ಅಫೇರ್’ ಪುಸ್ತಕವು
ಖರೀದಿಗೆ ಲಭ್ಯವಿದೆ. ತನ್ನ ಸಿನಿಮೀಯ ರೀತಿಯಲ್ಲಿ ಕತೆ ಹೇಳುವ ಈ ವಿಶೇಷ ಪುಸ್ತಕವು ಓದುಗರನ್ನು ಆಕರ್ಷಿಸಿದೆ. ಕನ್ನಡ ಹಾಗೂ ಮಲಯಾಳಂ ಸಿನಿಮಾ ರಂಗದ ಹಲವು ಉದಯೋನ್ಮುಖ ನಟ ನಟಿಯರಿಂದ ಪ್ರಶಂಸೆಯನ್ನೂ ಪಡೆದಿದೆ. ಈಯೊಂದು ಅಭೂತಪೂರ್ವ ಓದುವ  ಅನುಭವವನ್ನು ಕಳೆದುಕೊಳ್ಳಬೇಡಿ.

LEAVE A REPLY

Please enter your comment!
Please enter your name here