ಮಂಗಳೂರು :ಉರ್ವಾ ಮೈದಾನದ ಬಳಿಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉರ್ವಾ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.



ಬಂಧಿತರನ್ನು ಮಂಗಳೂರಿನ ಚಿಲಿಂಬಿ ನಿವಾಸಿ ಗೋಕುಲ್‌ದಾಸ್ ಶೆಣೈ (55) ಹಾಗೂ ಕೋಡಿಕಲ್ ನಿವಾಸಿ ದೀಪಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದ ಉರ್ವ ಮೈದಾನದ ಬಳಿಯ ಪಾಲಿಕೆ ಕಟ್ಟಡದ ಮುಂಭಾಗದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದರು. ಆರೋಪಿಗಳಿಂದ ನಗದು, ಮಟ್ಕಾ ಚೀಟಿಗಳು, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಮಟ್ಕಾಕ್ಕೆ ಸಂಬಂಧಿಸಿದ ₹ 4,24,490 ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

