ಮಂಗಳೂರು: ಮಂಗಳೂರಿನ ಯುವ ನ್ಯಾಯವಾದಿ ಮಹಮ್ಮದ್ ಅಸ್ಗರ್ ಮುಡಿಪು ರವರ ಬಗ್ಗೆ ಬೆಳ್ತಂಗಡಿಯಲ್ಲಿ ಲುಕ್ಮಾನ್ ಹಕೀಂ ಧರ್ಮಸ್ಥಳ ಎಂಬಾತ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ, ಆ ಅವಹೇಳನಕಾರಿ ಹೇಳಿಕೆಯು ಪ್ರಜಾ ಪ್ರಕಾಶವೆಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಂಡು ವೀಡಿಯೋ ವೈರಲ್ ಆಗಿತ್ತು.
ಸದ್ರಿ ವೀಡಿಯೂ ತಮ್ಮ ಗಮನಕ್ಕೆ ತಲುಪಿದ ಪರಿಣಾಮ ನ್ಯಾಯವಾದಿ ಮಹಮ್ಮದ್ ಅಸ್ಗರ್ ಮುಡಿಪು ನ್ಯಾಯಾಲಯದ ಮೆಟ್ಟಿಲೇರಿದ್ದು ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ಹೂಡಿದ್ದು, ಸದ್ರಿ ಪ್ರಕರಣದ ವಾದವನ್ನು ಆಲಿಸಿದ ಮಂಗಳೂರಿನ 2 ನೇ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಧೀಶರಾದ ಅಂಜಲಿ ಶರ್ಮ ಸದ್ರಿ ಪ್ರಕರಣದಲ್ಲಿ ಆರೋಪಿಗಳಿಬ್ಬರ ಮೇಲೆ ಸಮನ್ಸ್ ಹೊರಡಿಸಿ ನ್ಯಾಯಲಯದ ಮುಂದೆ ಹಾಜರಾಗಳು ಆದೇಶ ಮಾಡಿರುತ್ತದೆ. ನ್ಯಾಯವಾದಿ ಮಹಮ್ಮದ್ ಅಸ್ಗರ್ ಪರವಾಗಿ ಯುವ ನ್ಯಾಯವಾದಿಗಳಾದ ಇಸ್ಮಾಯಿಲ್ ಶಾಫಿ ಬೈಕಂಪಾಡಿ, ಲಾಯ್ಡ್ ಡಿ ಮೆಲ್ಲೊ ಮುಲ್ಕಿ, ಅಲ್ ವಾರಿಸ್ ಇರ್ಷಾದ್ ಹಿಮಮಿ ಸಖಾಫಿ ಮೊಂಟೆಪದವು, ಮೊಹಮ್ಮದ್ ಅಫ್ವಾನ್ ಅಬ್ದುಲ್ ಗಫೂರ್ ವಾದ ಮಂಡಿಸಿರುತ್ತಾರೆ.