Home ಕರಾವಳಿ KSRTC ಯಲ್ಲಿ 46 ಮಂದಿ ಚಾಲಕ ಹುದ್ದೆಗೆ ಆಯ್ಕೆ : ಸ್ವಂತ ಖರ್ಚಿನಲ್ಲೇ ತರಬೇತಿ ವ್ಯವಸ್ಥೆ...

KSRTC ಯಲ್ಲಿ 46 ಮಂದಿ ಚಾಲಕ ಹುದ್ದೆಗೆ ಆಯ್ಕೆ : ಸ್ವಂತ ಖರ್ಚಿನಲ್ಲೇ ತರಬೇತಿ ವ್ಯವಸ್ಥೆ ಮಾಡಿದ್ದ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು : ಕೆಎಸ್‌ಆರ್‌ಟಿಸಿ ಯಲ್ಲಿ ಪುತ್ತೂರು ವಿಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಚಾಲಕ ಹುದ್ದೆ ಇರುವುದನ್ನು ಮನಗಂಡು ಈ ಹುದ್ದೆಗೆ ದ ಕ ಜಿಲ್ಲೆಯವರನ್ನೇ ನೇಮಕವಾಗಬೇಕು ಎಂಬ ಉದ್ದೇಶದಿಂದ ಚಾಲಕ ಹುದ್ದೆಗೆ ಸುಮಾರು 70 ಮಂದಿ ಅರ್ಜಿ ಸಲ್ಲಿಸಿದ್ದರು.


ಈ ಪೈಕಿ ತರಬೇತಿಗೆ ಹಾಜರಾಗಿ ಮೊದಲ ಪರೀಕ್ಷೆಯಲ್ಲಿ 55 ಮಂದಿ ತೇರ್ಗಡೆಹೊಂದಿದ್ದರು, ಈ ಪೈಕಿ 49 ಮಂದಿಗೆ ಮೊದಲ ಹಂತದಲ್ಲಿ ಚಾಲಕ ಹುದ್ದೆಗೆ ನೇಮಕವಾಗಿದ್ದು ಶಾಸಕರು ಪಟ್ಟ ಶ್ರಮ ಸಾರ್ಥಕವಾಗಿದೆ.

ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಶಾಸಕರು ತನ್ನ ಸ್ವಂತ ಖರ್ಚಿನಿಂದ ಎಲ್ಲಾ ಚಾಲಕ ಆಕಾಂಕ್ಷಿಗಳನ್ನು ಹಾಸನಕ್ಕೆ ಕರೆದೊಯ್ದು ಅಲ್ಲಿ ತರಬೇತಿಯನ್ನು ಕೊಡಿಸಿದ್ದರು. ಮೊದಲ ಹಂತದ ತರಬೇತಿಯಲ್ಲಿ 72 ಮಂದಿ ಮತ್ತು ಎರಡನೆ ತಂಡದಲ್ಲಿ ೨೮ ಮಂದಿಗೆ ತರಬೇತಿಯನ್ನು ನೀಡಲಾಗಿತ್ತು. ಈ ಪೈಕಿ ಕೆಲವು ಮಂದಿ ತರಬೇತಿಯಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ಮುಂದಿನ ತರಬೇತಿ ಅವಧಿಗೆ ಕಾಯ್ದಿರಿಸಲಾಗಿತ್ತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದವರು ಆ.10 ರಂದು ಪ್ರಾದೇಶಿಕ ತರಬೇತಿ ಕೇಂದ್ರ ಹಾಸದಲ್ಲಿ ಚಾಲಕರ ಆಯ್ಕೆ ಯನ್ನು ಮಾಡಿರುತ್ತಾರೆ. ಇದರಲ್ಲಿ ಟ್ರಸ್ಟ್ ಮೂಲಕ ತರಬೇತಿ ಪಡಕೊಂಡ 46 ಮಂದಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಠೆಯ ಹೊರಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರಾಗಿ ಆಯ್ಕೆಯಾಗಿರುತ್ತಾರೆ.

ನಮ್ಮ ಜನರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಹುದ್ದೆ ದೊರೆಯಬೇಕೆಂಬ ಉದ್ದೇಶದಿಂದ ನಾನು ಚಾಲಕ ಹುದ್ದೆಗೆ ಅರ್ಜಿ ಹಾಕುವಂತೆ ಪತ್ರಿಕೆಯಲ್ಲಿ ಜಾಹಿರಾತು ನೀಡಿ, ಹುದ್ದೆ ಆಕಾಂಕ್ಷಿಗಳನ್ನು ಆಯ್ಕೆ ಮಾಡಿ ಅವರನ್ನು ತನ್ನ ಸ್ವಂತ ಖರ್ಚಿನಲ್ಲೇ ಹಾಸಕನಕ್ಕೆ ಕರೆದೊಯ್ದು ಚಾಲನಾ ತರಬೇತಿಯನ್ನು ಕೊಡಿಸಿದ್ದು ಮೊದಲ ಆಯ್ಕೆ ಪ್ರಕ್ರಿಯೆಯಲ್ಲಿ ೪೬ ಮಂದಿ ಚಾಲಕ ಹುದ್ದೆಗೆ ನೇಮಕವಾಗಿದ್ದಾರೆ.

ಸರಕಾರಿ ಹುದ್ದೆಗೆ ಈ ಭಾಗದವರು ಅರ್ಜಿ ಹಾಕುವುದು ಬಹಳ ಕಡಿಮೆ. ನಮ್ಮವರಿಗೂ ಸರಕಾರಿ ಹುದ್ದೆ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ನಾನು ಶಾಸನೆಂಬ ನೆಲೆಯಲ್ಲಿ ಪ್ರಯತ್ನ ಪಟ್ಟಿದ್ದೆ ಅದಕ್ಕೆ ಪೂರಕ ಎಂಬಂತೆ ಚಾಲಕರು ಸಹಕಾರ ನೀಡಿದ್ದು ಇದೀಗ 46 ಮಂದಿಗೆ ಉದ್ಯೋಗ ಲಭಿಸಿದ್ದು ನನಗೆ ಅತೀವ ಸಂತೋಷವನ್ನು ತಂದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here