Home ತಾಜಾ ಸುದ್ದಿ ಜೈಲರ್ ಇದು ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ಮಾಡಿದ ಸಿನಿಮಾ

ಜೈಲರ್ ಇದು ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ಮಾಡಿದ ಸಿನಿಮಾ

0

ಮಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ “ಜೈಲರ್”‘ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿರುವ ಜೈಲರ್ ಒಂದು ವಾರದಲ್ಲಿ ವಿಶ್ವದಾದ್ಯಂತ 450 ಕೋಟಿ ರೂಪಾಯಿ ಬಾಚಿಕೊಂಡಿದೆ.
ರಜನಿಕಾಂತ್ ಅವರ ಅಭಿನಯ ಹಾಗೂ ಅವರನ್ನು ತೆರೆಯ ಮೇಲೆ ಬಳಸಿಕೊಂಡಿರುವ ರೀತಿ ನೋಡಿದರೆ ನಿರ್ದೇಶಕ ನೆಲ್ಸನ್ ಒಬ್ಬ ಪಕ್ಕಾ ರಜನಿ ಅಭಿಮಾನಿ ಎಂದು ಏಕೆಂದರೆ ರಜನಿ ಅಭಿಮಾನಿಗಳು ಅವರನ್ನು ಹೇಗೆ ನೋಡಬೇಕು ಎಂದು ಬಯಸುತ್ತಾರೋ ಅದಕ್ಕಿಂತ ಮಿಗಿಲಾಗಿ ನೆಲ್ಸನ್ ರಜನಿಕಾಂತ್ ಅವರನ್ನು ತೋರಿಸಿದ್ದಾರೆ. ಅನಿರುದ್ದ್ ಅವರ ಹಿನ್ನಲೆ ಸಂಗೀತ ಕೂಡ ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್ ಅಭಿಮಾನಿಗಳು ಹುಚ್ಚೆದ್ದು ಚಿತ್ರ ಮಂದಿರಗಳಲ್ಲಿ ಕುಣಿಯವಂತೆ ಹಿನ್ನಲೆ ಸಂಗೀತ ಹಾಗೂ ಕಾವಲಯ್ಯ ಹಾಡುಗಳನ್ನು ನೀಡಿದ್ದಾರೆ. ಮೊದಲಾರ್ಧ ವೇಗವಾಗಿ ಸಾಗಿದರೆ ಮಧ್ಯಂತರದ ಬಳಿಕ ಸ್ವಲ್ಪ ನಿಧಾನ ಎನಿಸಿದರೂ ರಜನಿ ಅವರ ಫ್ಲಾಶ್ ಬ್ಯಾಕ್ ಜೈಲರ್ ಲುಕ್ ಹಾಗೂ ಅವರ ಎಂಟ್ರಿ ಅಭಿಮಾನಿಗಳನ್ನು ಎದ್ದು ಶಿಳ್ಳೆ ಹೊಡೆಯುವಂತೆ ಮಾಡುತ್ತದೆ. ಉಳಿದಂತೆ ಕನ್ನಡದ ಸ್ಟಾರ್ ನಟ ಶಿವಣ್ಣ ಎಂಟ್ರಿ ಹಾಗೂ ಅವರ ಲುಕ್ಸ್ ತಮಿಳಿನ ಪ್ರೇಕ್ಷಕರಿಗೆ ಒಬ್ಬ ಹೊಸ ಸ್ಟಾರ್ ದೊರಕಿದ ಅನುಭವ ನೀಡುತ್ತದೆ, ಹಾಗೆಯೇ ಮಲಯಾಳಂ ಸ್ಟಾರ್ ಮೋಹನ್ ಲಾಲ್, ಖಳ ನಟನಾಗಿ ವಿನಾಯಕನ್, ರಮ್ಯ ಕೃಷ್ಣ, ಯೋಗಿ ಬಾಬು, ತೆಲುಗಿನ ಸುನಿಲ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜೈಲರ್ ಪಕ್ಕಾ ಕೌಟುಂಬಿಕ, ಕಮರ್ಶಿಯಲ್, ಡಾರ್ಕ್ ಕಾಮಿಡಿ ಹೊಂದಿರುವ ಚಿತ್ರವಾಗಿದ್ದು ಇನ್ನೂ ಹಲವಾರು ದಾಖಲೆಗಳನ್ನು ಪುಡಿಗಟ್ಟಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ.


LEAVE A REPLY

Please enter your comment!
Please enter your name here