ಪುತ್ತೂರು: ಕಾಂಗ್ರೆಸ್ ಪಕ್ಷದ ಅಭಿವೃದ್ದಿ ವಿಚಾರ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆಗುತ್ತಿರುವ ಅಭಿವೃದ್ದಿ ಮತ್ತು ಜನಪರ ಯೋಜನೆಗಳನ್ನು ಮನಗಂಡು ಇಂದು ಅನೇಕ ಮಂದಿ ಬಿಜೆಪಿಗರು ಕಾಂಗ್ರೆಸ್ ಸೇರುತ್ತಿದ್ದಾರೆ. ಇಂದು ಉಪ್ಪಿನಂಗಡಿಯಲ್ಲಿ ನಡೆದ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ಬಿಜೆಪಿ ಬೆಂಬಲಿತರು ಕಾಂಗ್ರೆಸ್‌ಗೆ ಸೇರಿದ್ದು ಅತ್ಯಂತ ಸಂತೋಷದ ವಿಚಾರವಾಗಿದ್ದು ಇದರಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಉಪ್ಪಿನಂಗಡಿ ಗ್ರಾಪಂ ಇಂದು ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಮುಂದೆ ಉಪ್ಪಿನಂಗಡಿ ಗ್ರಾಪಂ ನ ಪ್ರತೀ ವಾರ್ಡಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಬಿಜೆಪಿ ಬೆಂಬಲಿತರು ಇಂದು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ವಾರ್ಡನ್ನು ಅಭಿವೃದ್ದಿ ಮಾಡಿಲ್ಲ ಇದೇ ಕಾರಣಕ್ಕೆ ಜನ ಇಂದು ಕಾಂಗ್ರೆಸ್‌ಗೆ ತಂಢೋಪತಂಡವಾಗಿ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು ಇಂದು ಜನರ ಮನಸ್ಸನ್ನು ತಲುಪಿದೆ. ಮುಂದೆ ಅನೇಕ ಮಂದಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗ್ರಾಪಂ ಸದಸ್ಯರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಅವರನ್ನು ಪಕ್ಷಕ್ಕೆ ಸೇರಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಗ್ರಾಪಂ ಆಡಳಿತವನ್ನು ಕಾಂಗ್ರೆಸ್ ಬಿಜೆಪಿಯಿಂದ ಕಸಿದುಕೊಂಡಿದೆ. ಆರ್ಯಾಪು ಗ್ರಾಪಂ ನ ನಿಕಟಪೂರ್ವ ಉಪಾಧ್ಯಕ್ಷರು ಸಹಿತ ಇಬ್ಬರು ಇಂದು ಕಾಂಗ್ರೆಸ್ ಸೇರಿಕೊಂಡಿದ್ದಾರೆ . ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ , ಸಿದ್ದರಾಮಯ್ಯ ಸರಕಾರದ ಬಡವರ ಪರ ಯೋಜನೆಗಳು ಜನರನ್ನು ಕಾಂಗ್ರೆಸ್‌ನತ್ತ ಆಕರ್ಷಿಸುವಂತೆ ಮಾಡಿದೆ ಎಂದು ಶಾಸಕರು ಹೇಳಿದರು.
ಪಕ್ಷಕ್ಕೆ ಸೇರ್ಪಡೆಯಾದವರನ್ನು ಅತ್ಯಂತ ಗೌರವಾದರಗಳಿಂದ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ಹೇಳಿದ ಶಾಸಕರು ಇಂದು ನನಗೆ ಅತ್ಯಂತ ಸಂತೋಷ ದಿನವಾಗಿದೆ ಎಂದು ಹೇಳಿದರು. ಉಪ್ಪಿನಂಗಡಿ ಗ್ರಾಪಂ ನಲ್ಲಿ ಮುಂದಿನ ದಿನಗಳಲ್ಲಿ ಪ್ರತೀ ವಾರ್ಡಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ. ಬಡವರ ಕೆಲಸಗಳು ಆಗಲಿದೆ ಇದರಲ್ಲಿ ಯಾವುದೇ ಅನುಮಾನವೇ ಬೇಡ. ಪಕ್ಷಕ್ಕೆ ಇನ್ನಷ್ಟು ಮಂದಿಯನ್ನು ಸೇರ್ಪಡೆಗೊಳಿಸುವ ಮೂಲಕ ನಾವು ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡಿ ಕ್ಷೇತ್ರದ ಪ್ರತೀ ಮನೆಗೂ ಕಾಂಗ್ರೆಸ್‌ನ ಯೋಜನೆಗಳು ದೊರಕುವಂತೆ ಮಾಡಬೇಕು ಎಂದು ಹೇಳಿದರು.ಪಕ್ಷೇತರ ಸದಸ್ಯರಾದ ಸಣ್ಣಣ್ಣ ಮಡಿವಾಳ, ನಾಲ್ವರು ಎಸ್‌ಡಿಎಪಿಐ ಸದಸ್ಯರಾದ ರಶೀದ್, ಸೌಧ, ಮೈಶಿದಿ ಮತ್ತು ನೆಬಿಸಾ ರವರು ಕಾಂಗ್ರೆಸ್ ಬೆಂಬಲಿತರಿಗೆ ಬೆಂಬಲ ನೀಡಿದರು. ನೂತನ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಪಕ್ಷೇತರ ಸದಸ್ಯರನ್ನು ಶಾಸಕರು ಶಾಲು ಹೊದಿಸಿ ಗೌರವಿಸಿದರು.
ಬಿಜೆಪಿ ಆಡಳಿತದ ವೈಫಲ್ಯದಿಂದ ಕಾಂಗ್ರೆಸ್ ಸೇರಿದ್ದಾರೆ
ಹಿಂದಿನ ಅವಧಿಯಲ್ಲಿದ್ದ ಬಿಜೆಪಿ ಗ್ರಾಪಂ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡದೇ ಇರುವ ಕಾರಣ ಬಿಜೆಪಿ ಬೆಂಬಲಿತರು ಅಭಿವೃದ್ದಿಯ ದೃಷ್ಟಿಯಿಂದ ಕಾಂಗ್ರೆಸ್ ಸೇರಿದ್ದಾರೆ. ಪಕ್ಷೇತರ ಅಭ್ಯರ್ಥಿ ಸಣ್ಣನ್ನ ಅವರು ಬೆಂಬಲ ನೀಡಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಎಸ್‌ಡಿಪಿಐ ಯವರು ಕಾಂಗ್ರೆಸ್‌ಗೆ ಬೆಂಬಲವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉಪ್ಪಿನಂಘಡಿ ಬಿಜೆಪಿ ಮುಕ್ತವಾಗಲಿದೆ , ಜನರು ನಮಗೆ ಖಂಡಿತವಾಗಿಯೂ ಆಶೀರ್ವಾದ ಮಡಲಿದ್ದಾರೆ. ಇನ್ನಷ್ಟು ಬಿಜೆಪಿ ಬೆಂಬಲಿತ ಸದಸ್ಯರು ನಮ್ಮ ಶಾಸಕರ ಅಭಿವೃದ್ದಿ ಕೆಲಸವನ್ನು ಮನಗಂಡು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿಯವರು ಹೇಳಿದರು.
ವಿಟ್ಲ ಉಪ್ಪಿನಗಂಡಿ ಬ್ಲಾಕ್ ಮಾಜಿ ಅಧ್ಯಕ್ಷಮುರಳೀಧರ್ ರೈ ಮಠಂತಬೆಟ್ಟು ಮಾತನಾಡಿ ಗ್ರಾಪಂ ಉಪ್ಪಿನಂಗಡಿ ಗ್ರಾಪಂ ಚುನಾವಣೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗ್ರಾಪಂ ಸದಸ್ಯರುಗಳಾದ ಯು ಟಿ ತೌಸೀಫ್, ಅಬ್ದುಲ್‌ರಹಿಮಾನ್ ಮಠ, ಇಬ್ರಾಹಿಂ ಪುಳಿತ್ತಡಿ, ವಿನಾಯಕ ಪೈ, ವಿಟ್ಲ ಉಪ್ಪಿನಂಗಡಿ ಮಾಜಿ ಬ್ಲಾಕ್ ಅಧ್ಯಕ್ಷರಾದ ಪ್ರವೀಣ್‌ಚಂಧ್ರ ಆಳ್ವ, ಡಿಸಿಸಿ ಕಾರ್ಯದರ್ಶಿ ಉಮಾನಾಥ ಶೆಟ್ವ ಪೆರ್ನೆ, ಮಹಮ್ಮದ್ ಕೆಂಪಿ, ಸಿದ್ದಿಕ್ ಕೆಂಪಿ, ಶಬ್ಬೀರ್ ಕೆಂಪಿ, ಸೋಮನಾಥ ರಾಮನಗರ, ವೆಂಕಪ್ಪ ಪೂಜಾರಿ, ಕೃಷ್ಣ ರಾವ್ ಅರ್ತಿಲ, ಅಝೀಝ್ ಬಸ್ತಿಕ್ಕಾರ್, ಉಮೇಶ್ ರಾಮನಗರ , ಮಜೀದ್ , ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಸುಶಾನ್ ಶೆಟ್ಟಿ, ಸುಮಿತ್ ಶೆಟ್ಟಿ, ದಾಮೋಧರ ಭಂಡಾರ್ಕರ್, ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ನಝೀರ್ ಮಠ, ವಲಯಾಧ್ಯಕ್ಷ ಆದಂ ಮಠ, ಕೃಷ್ಣಪ್ಪ ಎನ್, ಇಬ್ರಾಹಿಂ ಆಚಿ ಕೆಂಪಿ, ಝಕರಿಯ್ಯಾ ಕೊಡಿಪ್ಪಾಡಿ, ಮುಸ್ತಫಾ, ಯು ಟಿ ಫೌಝರ್, ರಫೀಕ್ ಝೆನ್ ಮತ್ತಿತರರು ಉಪಸ್ಥಿತರಿದ್ದರು.