ಕೆಯ್ಯುರು : ಎಸ್.ಕೆ.ಎಸ್.ಎಸ್.ಎಪ್ ವಿಖಾಯ ವತಿಯಿಂದ ಕೆಪಿಎಸ್ ಕೆಯ್ಯೂರು ಶಾಲೆಯಲ್ಲಿ 76 ನೇ ಸ್ವಾತಂತ್ರ್ಯೋತ್ಸವಕ್ಕೆ ಮುನ್ನುಡಿಯಾಗಿ ಸ್ವಚ್ಛತೆ ಕಾರ್ಯಕ್ರಮವನ್ನು ಅ13ರಂದು ಹಮ್ಮಿಕೊಳ್ಳಲಾಯಿತು.
ಶಾಲಾ ಆವರಣದೊಳಗೆ ದಟ್ಟವಾಗಿ ಬೆಳೆದಿದ್ದ ಪೊದೆಗಳನ್ನು ಮತ್ತು ಹುಲ್ಲುಗಳನ್ನು ಕಡಿದು ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾ.ಪಂ.ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ಇದರ ಉಸ್ತುವಾರಿ ವಹಿಸಿದ್ದರು.
ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ ಮುಖ್ಯಗುರು ಬಾಬು.ಎಂSKSSF ವಿಖಾಯವರ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ SKSSF ಅಧ್ಯಕ್ಷ ನಿಜಾಮ್ ಹೊನೆಸ್ಟ್, ವಿಖಾಯ ಕಾರ್ಯದರ್ಶಿ ಹಾರಿಸ್ ಪಾತುಂಜ, ಕಾರ್ಯದರ್ಶಿ ಶಮೀರ್, ಸಂಘಟನಾ ಕಾರ್ಯದರ್ಶಿ ಮಸೂದ್, ವಿಜ್ಞಾನ ಶಿಕ್ಷಕ ಇಬ್ರಾಹಿಂ ಎಸ್ ಎಮ್. ಸಿರಾಜ್ ಎ ಕೆ, ನಾಸಿರ್ ಹೊನೆಸ್ಟ್, ಉಸ್ಮಾನ್ ಅಕ್ಕರೆ, ಇರ್ಫಾನ್ ಕಂಚಿನಪದವು, ಉಮ್ಮರ್ ಮುಕ್ಕೂರು, ಉಮರ್ ರಿಂಗ್, ಸುಹೈಲ್ ಪಾತುಂಜ, ಮನ್ಸೂರ್ ಮಾಡಾವು, ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರು ದೈಹಿಕ ಶಿಕ್ಷಕ ನವೀನ್ ಕುಮಾರ್ ರೈ, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ SDMC ಸದಸ್ಯರಾದ ಅಯ್ಯುಬ್ ಮತ್ತು ಧರಣಿ.ಸಿ ಉಪಸ್ಥಿತರಿದ್ದು ಸ್ವಚ್ಛತೆಯಲ್ಲಿ ಭಾಗವಹಿಸಿದರು. ಜಯಂತ್ ಪೂಜಾರಿ ಕೆಂಗುಡೇಲು ,ಸ್ವಯಂ ಸೇವಕರಿಗೆ ಚಹಾ ಮತ್ತು ತಿಂಡಿ ವ್ಯವಸ್ಥೆ ಮಾಡಿದರು.