Home ಕರಾವಳಿ ಮಂಗಳೂರು : ಕಲಾಶ್ರೀ ಬೆದ್ರ ತಂಡದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ – ಸಾಧಕರಿಗೆ ಸನ್ಮಾನ

ಮಂಗಳೂರು : ಕಲಾಶ್ರೀ ಬೆದ್ರ ತಂಡದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ – ಸಾಧಕರಿಗೆ ಸನ್ಮಾನ

0

ಕರಾವಳಿ ಕರ್ನಾಟಕದಲ್ಲೇ ಪ್ರಸಿದ್ಧ ತಂಡ ಎಂದೇ ಗುರುತಿಸಿಕೊಂಡಿರುವ ತುಳು -ಕನ್ನಡ ಚಿತ್ರ ನಟ ಸಂದೀಪ್ ಶೆಟ್ಟಿ ರಾಯಿ ಇವರ ನಾಯಕತ್ವದ ಹಾಗೂ ರಮೇಶ್ ಶೆಟ್ಟಿ ಮಿಜಾರು ಸಾರಥ್ಯದ ಕಲಾಶ್ರೀ ಕುಸಾಲ್ದ ಕಲಾವಿದೆರ್ ಬೆದ್ರ ಇವರ ಈ ವರ್ಷದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪುರ ಭವನದಲ್ಲಿ ನಡೆಯಿತು.


ಕಾರ್ಯಕ್ರಮಕ್ಕೆ ಆಗಮಿಸಿದ ಡಾ.ದೇವದಾಸ್ ಕಾಮಿಕಾಡ್, ವಿಜಯ ಕುಮಾರ್ ಕೊಡಿಯಲ್ ಬೈಲ್, ಭೋಜರಾಜ್ ವಾಮಂಜೂರು, ಸುನಿಲ್ ಕುಮಾರ್ ನೆಲ್ಲಿಗುಡ್ಡೆ, ಶಾಸಕ ವೇದವ್ಯಾಸ್ ಕಾಮತ್ ಹಾಗೂ ಬ್ರಿಜೇಶ್ ಚೌಟ ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ನಾಲ್ಕು ಜನ ಸಾಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶ್ವಾನ ಪ್ರೇಮಿ ರಜನಿ ಶೆಟ್ಟಿ ಹಾಗೂ ಹಿರಿಯ ನಾಟಿ ವೈದ್ಯರಾದ ಉಗ್ಗಪ್ಪ ಪೂಜಾರಿ, ರಂಗಭೂಮಿ ಮತ್ತು ತುಳು ಸಿನಿಮಾ ರಂಗಕ್ಕೆ ಕೊಡುಗೆ ನೀಡಿದ ಪ್ರಕಾಶ್ ಶೆಟ್ಟಿ ಧರ್ಮನಗರ ಹಾಗೂ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಸನ್ಮಾನ‌ವನ್ನು ಮಾಡಲಾಯಿತು. ಆನಂತರ ವೇದಿಕೆಯಲ್ಲಿ ಈ ವರ್ಷದ ಹೊಸನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಂದೀಪ್ ಶೆಟ್ಟಿ ರಾಯಿ ನಿರ್ದೇಶನದ ತಿಗಲೆಗ್ ದಿವೊಂಡೆರ್ ಎನ್ನುವ ಹೊಸ ನಾಟಕ ಈ ವರ್ಷ ಮೂಡಿಬರಲಿದೆ.

ಆ ಬಳಿಕ ಮಾತನಾಡಿದ ಡಾ.ದೇವದಾಸ್ ಕಾಪಿಕಾಡ್ ತಂಡ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ, ಈ ತಂಡ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಎಲ್ಲಾ ನಾಟಕ ತಂಡದ ಜೊತೆ ನಾವು ಇದ್ದೇವೆ ಎಂದು ಶುಭಹಾರೈಸಿದರು. ಈ ಸಂದರ್ಭ ಕಲಾಶ್ರೀ ತಂಡದ ಎಲ್ಲಾ ಕಲಾವಿದರಿಗೆ ಗೌರವಿಸಲಾಯಿತು. ಇನ್ನು ಕಾರ್ಯಕ್ರಮದಲ್ಲಿ ರಶ್ಮಿತ್ ಶೆಟ್ಟಿ, ಬಿಜೆಪಿ ವಕ್ತಾರ ಕಿರಣ್ ರೈ, ಶಿವಶರಣ್ ಶೆಟ್ಟಿ, ಲೀಲಾಕ್ಷ ಕರ್ಕೇರಾ, ಅನುಪ್ ಸಾಗರ್, ಸ್ವರಾಜ್ ಶೆಟ್ಟಿ, ಶೇಖರ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಖ್ಯಾತ ನಿರೂಪಕ ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here