ಪ್ರೇಕ್ಷಕರ ಮನರಂಜನೆಗಾಗಿ ಸದಾಕಾಲ ಹೊಸತನವನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ “ಗುರುದೇವ್ ಹೊಯ್ಸಳ” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಈ ಸಿನಿಮಾವು ಕಿರುತೆರೆಯಲ್ಲಿ ರಾರಾಜಿಸಲಿದೆ.
ಪಟ್ಟಣದ ಅತ್ಯಂತ ನಿಷ್ಠಾವಂತ ಹಾಗು ಶಕ್ತಿಶಾಲಿ ಪೊಲೀಸ್ ಅಧಿಕಾರಿ ಗುರುದೇವ್ ಹೊಯ್ಸಳ. ರಾಜಕಾರಣಿಗಳು ಹಾಗು ದರೋಡೆಕೋರರಿಂದ ಭೂ ಮಾಫಿಯಾವನ್ನು ತಡೆಗಟ್ಟುವಲ್ಲಿ ಗುರುದೇವ್ ಹೇಗೆ ಯಶಸ್ವಿಯಾಗುತ್ತಾರೆ ಎಂಬುದು ಈ ಸಿನಿಮಾದ ಮುಖ್ಯ ಕಥೆ. ಇನ್ನು ಇದೊಂದು ಸಾಮಾನ್ಯ ಪೊಲೀಸ್ ವಿಲನ್ ಕತೆ ಮಾತ್ರವಲ್ಲದೆ ಭಾಷೆ-ನೆಲದ ವಿಷಯವನ್ನು ಒಳಗೊಂಡ ಸುಂದರ ಕತೆಯಾಗಿದೆ.
‘ಹೊಯ್ಸಳ’ ಸಿನಿಮಾದ ನಾಯಕನಾಗಿ ಡಾಲಿ ಧನಂಜಯ್ ಹಾಗು ನಾಯಕಿಯಾಗಿ ಅಮೃತ ಅಯ್ಯಂಗಾರ್ ನಟಿಸಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ, ನಾಗಭೂಷಣ್ ಸೇರಿದಂತೆ ಇನ್ನು ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ ಈ ಸಿನಿಮಾವು ಇದೇ ಮೊದಲ ಬಾರಿಗೆ ಕಿರುತೆರೆಯ ಮೂಲಕ ನಿಮ್ಮ ಮನೆಯಂಗಳಕ್ಕೆ ಬರಲಿದೆ.
ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಪ್ರೇಕ್ಷಕರಿಗಾಗಿ ಉಡುಗೊರೆಯನ್ನು ನೀಡಲು ಸಜ್ಜಾಗಿದೆ. ‘ಗುರುದೇವ್ ಹೊಯ್ಸಳ’ ಸಿನಿಮಾವನ್ನು ಟಿವಿಯಲ್ಲಿ ನೋಡಿ, ಅಲ್ಲಿ ಕೇಳುವ 2 ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ 43 ಇಂಚಿನ LED TV ಯನ್ನು ನಿಮ್ಮದಾಗಿಸಿಕೊಳ್ಳಿ.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಿಮ್ಮ ಮನೆಗೆ ಬರ್ತಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ “ಗುರುದೇವ್ ಹೊಯ್ಸಳ” ಇದೇ ಆಗಸ್ಟ್ 13 ರಂದು ಭಾನುವಾರ ಸಂಜೆ 6.00 ಕ್ಕೆ ನಿಮ್ಮ ನೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.