ಬೆಳ್ತಂಗಡಿ : ಬಿಜೆಪಿ ಪಕ್ಷದ ಇಬ್ಬರು ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುವ ಮೂಲಕ ಬಿಜೆಪಿ ಪಕ್ಷಕ್ಕೆ ಬಿಗ್ ಶಾಕ್ ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷ ಪುನೀತ್ ಕುಮಾರ್, ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯ ವಸಂತ ಪೂಜಾರಿ ಆಗಸ್ಟ್ 10 ರಂದು(ಇಂದು) ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರರು ಕಾಂಗ್ರೆಸ್ ಪಕ್ಷದ ಬಾವುಟ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.



ಕಾಂಗ್ರೆಸ್ ಪಕ್ಷ ಸೇರ್ಪಡೆ ವೇಳೆ ಬ್ಲಾಕ್ ಕಾಂಗ್ರೆಸ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ನ , ಗ್ರಾಮೀಣ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಾಗೇಶ್ ಗೌಡ, ಮನೋಹರ್ ಕುಮಾರ್, ಶೇಖರ್ ಕುಕ್ಕೇಡಿ ,ಜಯ ವಿಕ್ರಂ, ಬೇಬಿ ಸುವರ್ಣ, ಉಮೇಶ್ ಮಾಲಾಡಿ, ಪದ್ಮನಾಭ ಸಾಲ್ಯಾನ್,ಪ್ರವೀಣ್ ಫರ್ನಾಂಡೀಸ್,ಪ್ರೇಮ ವಸಂತ್ ,ಹರೀಶ್ ಪೂಜಾರಿ, ಉಮೇಶ್ ಪೂಜಾರಿ,ರಾಕೇಶ್ ಕುಮಾರ್ ಮತ್ತಿತರರು ಜೊತೆಯಲ್ಲಿದ್ದರು.

