ತಿರುವನಂತಪುರಂ : ಕೇರಳ ರಾಜ್ಯವನ್ನು ‘ಕೇರಳಂ’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ಕೇಂದ್ರವನ್ನು ಕೋರಿ ಮಂಡಿಸಲಾದ ನಿಲುವಳಿಗೆ ಕೇರಳ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ. ಹೌದು ದೇವರ ನಾಡು, ಪ್ರವಾಸಿಗರ ತವರು ಕೇರಳ ಇನ್ಮುಂದೆ ಕೇರಳಂ ಆಗಿದೆ. ಸಿಎಂ ಪಿಣರಾಯಿ ವಿಜಯನ್ ಕೇರಳ ರಾಜ್ಯಕ್ಕೆ ಕೇರಳಂ ಅನ್ನೋ ನಾಮಕರಣ ಮಾಡಿದ್ದು, ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಮಂಡಿಸಿದ್ದಾರೆ. ಇನ್ಮುಂದೆ ದಾಖಲೆಗಳಲ್ಲಿ ಕೇರಳ ಅನ್ನೋದರ ಬದಲು ಕೇರಳಂ ಅಂತಾ ದಾಖಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇರಳ ರಾಜ್ಯದ ಹೆಸರು ಬದಲಾಯಿಸುವ ಮಸೂದೆಯು ಅವಿರೋಧವಾಗಿ ಅಂಗೀಕರವಾಗಿದೆ. ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ರಾಜ್ಯದ ಹೆಸರು ಬದಲಾವಣೆಗೆ ಅವಕಾಶವಿದೆ. ಈ ಮೂಲಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಬಳಿಕ ಈ ಮಸೂದೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ರೆ ಅಧಿಕೃತವಾಗಿ ಕೇರಳ ರಾಜ್ಯ ಕೇರಳಂ ಆಗಲಿದೆ. ಇನ್ನು ಮಸೂದೆ ಪಾಸ್ ಮಾಡಿರೋ ಕೇರಳ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅಂಗೀಕಾರಕ್ಕೆ ಕಳುಹಿಸಿದೆ. ಇದರ ಜೊತೆಗೆ ಇನ್ಮುಂದೆ ಕೇರಳ ರಾಜ್ಯವನ್ನು ಕೇರಳಂ ಎಂದು ಇಡೀ ದೇಶಾದ್ಯಂತ ಎಲ್ಲಾ ಭಾಷೆಯಲ್ಲೂ ಬಳಸುವಂತೆ ಕೋರಲಾಗಿದೆ.