ಬೆಂಗಳೂರಿನಲ್ಲೇ ಕಂಬಳ ನಡೆಯಲಿದೆ. ಅದಕ್ಕಾಗಿ ಸ್ಥಳ ಪರಿಶೀಲನೆ ಕೂಡ ನಡೆದಿದೆ. ಬೆಂಗಳೂರಿನ ತುಳು ಕೂಟದ 50ನೇ ವರ್ಷದ ಸಂಭ್ರಮಾಚರಣೆ ಸಲುವಾಗಿ ಬೆಂಗಳೂರಿನಲ್ಲೇ ಕಂಬಳ ನಡೆಸಲು ನಿರ್ಧರಿಸಲಾಗಿದೆ. ಅದರಲ್ಲೂ ಬೆಂಗಳೂರಿನ ಅರಮನೆ ಮೈದಾನದಲ್ಲೇ ಈ ಕಂಬಳ ನಡೆಯಲಿದೆ.
ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆದಿದೆ. ಆದರೆ ಕಂಬಳ ಯಾವತ್ತು ನಡೆಯಲಿದೆ ಎನ್ನುವ ಕುರಿತು ಇನ್ನೂ ದಿನ ನಿಗದಿಯಾಗಿಲ್ಲ. ಯಾವ ಕೋಣಗಳನ್ನು ಇಲ್ಲಿನ ಕಂಬಳಕ್ಕೆ ಆಯ್ಕೆ ಮಾಡಬೇಕು, ಅವುಗಳನ್ನು ಊರಿನಿಂದ ಬೆಂಗಳೂರಿಗೆ ಹೇಗೆ ತರಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ. ಎಲ್ಲ ವಿಭಾಗದಲ್ಲೂ 8ರ ಸುತ್ತಿಗೆ ಪ್ರವೇಶಿಸಿದ ಕೋಣಗಳಿಗೆ ಮಾತ್ರ ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ರೈಲಿನ ಮೂಲಕ ಕಂಬಳದ ಕೋಣಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಸಾಗಿಸುವ ವಿಷಯ ಚರ್ಚೆಯಲ್ಲಿದೆ