ವಿಟ್ಲ: ಗುಡ್ಡ ಪ್ರದೇಶದಲ್ಲಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೀಟ್ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದ ಘಟನೆ ವೀರಕಂಭ ಗ್ರಾಮದ ಎರ್ಮೆಮಜಲಿನಲ್ಲಿ ನಡೆದಿದೆ. ಎರ್ಮೆಮಜಲು ಸರಕಾರಿ ಗುಡ್ಡ ಜಾಗದಲ್ಲಿ ಅಂದರ್-ಬಾಹರ್ ಎಂಬ ಇಸ್ಪೀಟು ಜುಗಾರಿ ಆಟವನ್ನು ಆಡುತ್ತಿದ್ದಾಗ ವಿಟ್ಲ ಪೊಲೀಸ್ ಠಾಣಾ ಪೊಲೀಸರು ದಾಳಿ ನಡೆಸಿ 3 ಜನ ಆರೋಪಿಗಳನ್ನು ಹಾಗೂ ನಗದು 15,785/-ರೂ. ಮತ್ತು ಸದರಿ ಜುಗಾರಿ ಆಟಕ್ಕೆ ಬಳಸಿದ ವಸ್ತುಗಳನ್ನು ಸ್ಥಳದಲ್ಲಿ ವಶಕ್ಕೆ ಪಡೆದಿದ್ದು , 06 ಜನ ಆರೋಪಿಗಳು ಪರಾರಿಯಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.