Home ಕರಾವಳಿ ಧರ್ಮಸ್ಥಳ: ನೈತಿಕ ಪೊಲೀಸ್‌ ಗಿರಿ ಪ್ರಕರಣ- ಮೂವರ ಬಂಧನ

ಧರ್ಮಸ್ಥಳ: ನೈತಿಕ ಪೊಲೀಸ್‌ ಗಿರಿ ಪ್ರಕರಣ- ಮೂವರ ಬಂಧನ

0

ಬೆಳ್ತಂಗಡಿ: ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.


ಆರೋಪಿಗಳಾದ ಅವಿನಾಶ್ ಧರ್ಮಸ್ಥಳ, ನಂದೀಪ್ ಧರ್ಮಸ್ಥಳ, ಅಕ್ಷತ್ ಉಪ್ಪಿನಂಗಡಿ ಬಂಧಿತರು. ಅಗಸ್ಟ್ 2ರ ರಾತ್ರಿ ಧರ್ಮಸ್ಥಳ ಬಸ್ ನಿಲ್ದಾಣ ಬಳಿ ಘಟನೆ ನಡೆದಿದ್ದು, ರಿಕ್ಷಾ ಚಾಲಕ ಮಹಮ್ಮದ್ ಆಸೀಕ್ ಎಂಬವರ ಮೇಲೆ ಹಲ್ಲೆಯಾಗಿತ್ತು. ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಕುರಿತು ಐಪಿಸಿ 143, 147, 341,323, 307, 395, 153 (ಎ) 504,506 ಜೊತೆಗೆ 149 IPC ಪ್ರಕರಣ ದಾಖಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಉಜಿರೆ ಕಾಲೇಜಿನ ಬೆಂಗಳೂರು ಮೂಲದ ಹಿಂದೂ ವಿದ್ಯಾರ್ಥಿನಿ ಊರಿಗೆ ತೆರಳಲು ಆಸೀಕ್ ಆಟೋ ಹತ್ತಿ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಈ ವೇಳೆ ತಡೆದು ನಿಲ್ಲಿಸಿ ಹಲ್ಲೆ ಮಾಡಿ ನೈತಿಕ ಪೊಲೀಸ್ ಗಿರಿ ನಡೆಸಲಾಗಿತ್ತು.

LEAVE A REPLY

Please enter your comment!
Please enter your name here