Home ಕರಾವಳಿ ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಹಿನ್ನೆಲೆ- ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಂದ...

ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಹಿನ್ನೆಲೆ- ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

0

ಪುತ್ತೂರು: ಮೋದಿ ಉಪನಾಮದ ಕುರಿತ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸೂರತ್ ನ್ಯಾಯಾಲಯ ವಿಧಿಸಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡುವ ಮೂಲಕ ಅವರ ಸಂಸದ ಸ್ಥಾನ ಮರುಸ್ಥಾಪಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆ.4ರಂದು ಪುತ್ತೂರು ಪೇಟೆಯಲ್ಲಿ ಸಂಭ್ರಮಾಚರಣೆ ನಡೆಸಿ ಸಿಹಿ ತಿಂಡಿ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಬ್ಲಾಕ್ಕಾಂಗ್ರೆಸ್ಅದ್ಯಕ್ಷರಾದ ಎಂ.ಬಿ ವಿಶ್ವನಾಥ ರೈ, ಉಪಾದ್ಯಕ್ಷರಾದ ಮೌರಿಸ್ ಮಷ್ಕರೇನಸ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಪರ್ಲಡ್ಕ, ಸಾಮಾಜಿಕ ಜಾಲತಾಣ ಅದ್ಯಕ್ಷರಾದ ಸಿದ್ದೀಕ್ ಸುಲ್ತಾನ್, ಪಂಚಾಯತ್ ರಾಜ್ ಅದ್ಯಕ್ಷರಾದ ಸಂತೋಷ್ ಭಂಡಾರಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಹಬೀಬ್ ಕಣ್ಣೂರು, ಸಿರಿಲ್ ರೋಡ್ರೀಗಸ್, ಅಸಂಘಟಿತ ಕಾರ್ಮಿಕ ಘಟಕ ಜಿಲ್ಲಾ ಕಾರ್ಯದರ್ಶಿ ಶರೀಫ್ ಬಲ್ನಾಡ್, ನೌಫಲ್ ಅಜ್ಜಿಕಲ್ಲು, ಹಿರಿಯ ನಾಯಕರಾದ ಚಂದ್ರಹಾಸ ರೈ ಬೋಳೋಡಿ, ಝುಬೈರ್ ಪಿ.ಕೆ, ಸಿನಾನ್ ಪರ್ಲಡ್ಕ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here