ಮಂಗಳೂರಿನ ಹಿರಿಯ ನ್ಯಾಯವಾದಿಗಳಾದ ವೈ ವಿಕ್ರಂ ಹೆಗ್ಡೆ ರವರನ್ನು ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಮಂಗಳೂರು ಹಾಗೂ ಇತರ ಜಿಲ್ಲಾ ನ್ಯಾಯಾಲಯದಲ್ಲಿ ಸುಮಾರು 35 ವರ್ಷಗಳ ವಕೀಲ ವೃತ್ತಿ ಜೀವನವನ್ನು ಯಶಸ್ವಿಯಾಗಿ ಸದ್ದಿಲ್ಲದೆ ಸಾಧಿಸಿದ ಮಂಗಳೂರಿನ ಹಿರಿಯ ನ್ಯಾಯವಾದಿಗಳಾದ ವೈ ವಿಕ್ರಂ ಹೆಗ್ಡೆ ರವರನ್ನು ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಇದರ ವಕೀಲರಾದ ಒಮರ್ ಫಾರೂಕ್, ಆಸಿಫ್ ಬೈಕಾಡಿ, ಮಹಮ್ಮದ್ ಅಸ್ಗರ್ ಮುಡಿಪು, ಅಬೂ ಹಾರಿಸ್, ಇಜಾಝ್ ಅಹ್ಮದ್ ಉಳ್ಳಾಲ , ಹೈದರ್ ಅಲಿ, ಇರ್ಷಾದ್, ರಿಫಾಝ್, ನಿರೀಕ್ಷ, ಮುಂತಾದವರು ಉಪಸ್ಥಿತರಿದ್ದರು.