ಉಳ್ಳಾಲ: ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರಿಗೆ ನಿವೃತ್ತ ಯೋಧನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉಳ್ಳಾಲ ತಾಲೂಕಿನ ಕುಂಪಲದ ಬಗಂಬಿಲ ಎಂಬಲ್ಲಿ ಆ.1ರಂದು ನಡೆದಿದೆ.
ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಕುಂಪಲ ಅಮೃತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್ (45) ಕಿರುಕುಳ ನೀಡಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಠಾಣೆಯೊಂದರ ಮಹಿಳಾ ಕಾನ್‌ಸ್ಟೇಬಲ್ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿದ ನಿವೃತ್ತ ಯೋಧ ಪ್ರಶಾಂತ್, ಆಕೆಯ ಮೈಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ತತ್‌ಕ್ಷಣ ಆಕೆ ಕಿರುಚಾಡಿದಾಗ ಸ್ಥಳೀಯರು ಜಮಾಯಿಸಿ ನಿವೃತ್ತ ಯೋಧನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.