ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಮಂಜೇಶ್ವರ ಮೇಘಲ ಸಮಿತಿಯ ಕುಟುಂಬ ಸಂಗಮವು ನಿನ್ನೆ ಬೆಳಗ್ಗೆ ಮಂಜೇಶ್ವರ ಬೀಚ್ ಬಳಿಯ ಅಮನ್ ಕೋಟೆಜ್ ನಲ್ಲಿ ನಡೆಯಿತು.
ಈ ಸಂದರ್ಬದಲ್ಲಿ ಮಾತನಾಡಿದ ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಸುರೇಂದ್ರನ್ ಲೋಕದ ಧ್ವನಿ ಬೆಳಕಿನ ಸಂಯೋಜನೆ ಭಗವಂತನ ಕೆಲಸ. ಅಂತೆಯೆ ನಾವು ಆ ದೇವರಿಗೆ ಪ್ರಿಯರಾಗುವಂತೆ ದುಡಿಯೋಣ. ಕೀಳರಿಮೆ ಬಿಟ್ಟು ನಮ್ಮ ವೃತ್ತಿಯನ್ನ ನಾವು ಗೌರವಿಸುವುದರ ಮೂಲಕ ಸಮಾಜದಲ್ಲಿ ಎದ್ದು ನಿಲ್ಲೋಣ. ಆಧುನಿಕತೆಯ ಬರದಲ್ಲಿ ಮಾನವೀಯತೆ ಮರೆಯದೆ ಪರಸ್ಪರ ಸಾಮರಸ್ಯದಿಂದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸೋಣ. ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಜನ ಮೈತ್ರಿ ಪೊಲೀಸ್ ಮಧು ಕಾರಕಡವತ್ ಮತ್ತು ಸಂಘಟನೆಯ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ: ಶಿಭು, ಕೋಶಾಧಿಕಾರಿ: ಎಸ್.ಎಸ್ ಹಂಝ, ಮಂಜೇಶ್ವರ ಮೇಘಲ ಸಮಿತಿ ಗೌರವಾಧ್ಯಕ್ಷ: ಬಿ.ಎಂ. ಯದುನಂದನ ಆಚಾರ್ಯ ಕಡಂಬಾರು, ಕಾರ್ಯದರ್ಶಿ ಅಬೂಬಕ್ಕರ್ ಆಸರ್, ಹಿರಿಯ ಸದಸ್ಯ: ಪುಂಡರೀಕ ನಾಯ್ಕ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದು.
ಈ ವೇಳೆ ತಲಪಾಡಿ ಶಾರದಾ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 96.1% ಅಂಕ ಪಡೆದ ಶಿವಾನಿ, ಹಾಗೂ ಮಂಜೇಶ್ವರ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 80 % ಅಂಕ ಪಡೆದ ತನ್ಮಯ್ ಇವರನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರತಿಭಾ ಪುರಸ್ಕಾರ ನೀಡಿಲಾಯಿತುಮೇಘಲ ಅಧ್ಯಕ್ಷ: ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ ದಿವಾಕರ್ ಪ್ರತಾಪನಗರ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು