ಮಂಗಳೂರು: ಮಂಗಳೂರಿನಲ್ಲಿ ಮುಖ್ಯ ಕಛೇರಿ ಹೊಂದಿದ ಲಿನೋ ಪುಡ್ಸ್ ಇಂಟರ್’ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ದೇಶ ವಿದೇಶಗಳಲ್ಲಿಯೂ ತನ್ನ ಪ್ರಾಂಚೈಸಿಗಳನ್ನು ಒಳಗೊಂಡು ಆಹಾರ ಉದ್ಯಮದಲ್ಲಿ ಮಹತ್ತರ ಸ್ಥಾನದಲ್ಲಿರುವ ಸಂಸ್ಥೆಯ ತಿಸಿಸುಗಳ ವಿರುದ್ದ ಕೇರಳದ ಮಲಪ್ಪುರಂ ಮೂಲದ ಜಿಶಾದ್ ಎಂಬ ವ್ಯಕ್ತಿ ಲಿನೋ ಪುಡ್ಸ್ ಇಂಟರ್’ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಒಡೆತನದ ಝಂಗುಸ್ ರೆಸ್ಟೊರೆಂಟಿನ ಚಿಕನ್ ಖಾದ್ಯದಲ್ಲಿ ಹುಳವಿದೆ ಎಂಬ ಸುಳ್ಳು ಪೂರಿತ ವೀಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ, ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಗಳು ಪರೀಕ್ಷೇ ನಡೆಸಿದಾಗ ಅದರಲ್ಲಿ ಯಾವುದೇ ಹುಳವಿಲ್ಲವೆಂಬುವುದು ಧೃಡಪಟ್ಟಿತ್ತು.
ಈ ಮೂಲಕ ಜಿಶಾದ್ ಎಂಬಾತನು ಸಂಸ್ಥೆಯ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಸದ್ರಿ ಕೃತ್ಯ ಎಸಗಿದ ಬಗ್ಗೆ ಸಂಸ್ಥೆಯ ಗಮನಕ್ಕೆ ಬಂದಿರುವುದರಿಂದ ಜಿಶಾದ್ ನ ವಿರುದ್ದ ಲಿನೋ ಪುಡ್ಸ್ ಇಂಟರ್’ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯು ಸುಮಾರು ಒಂದು ಕೋಟಿ ರುಪಾಯಿ ಮಾನನಷ್ಟದ ದಾವೆ ಹೂಡಿದ್ದು, ಪ್ರತಿವಾದಿ ಜಿಶಾದ್ ಗೆ ಮಂಗಳೂರಿನ ಹಿರಿಯ ಸಿವಿಲ್ ನ್ಯಾಯಾಧೀಶರು ದಾವೆಯನ್ನು ಪುರಸ್ಕರಿಸಿ ಪ್ರತಿವಾದಿಗೆ ಸಮನ್ಸ್ ಹೊರಡಿಸಲು ಆದೇಶಿಸಿರುತ್ತಾರೆ, ಲಿನೋ ಪುಡ್ಸ್ ಇಂಟರ್’ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಪರ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ವಕೀಲರಾಗಿರುವ ಆಸಿಫ್ ಬೈಕಾಡಿ, ಮಹಮ್ಮದ್ ಅಸ್ಗರ್ ಮುಡಿಪು, ಇಸ್ಮಾಯಿಲ್ ಶಾಫಿ ಬೈಕಂಪಾಡಿ ದಾವೆಯನ್ನು ಹೂಡಿರುತ್ತಾರೆ.