ಮಂಗಳೂರು: “ಪುಗರ್ತೆ ಕಲಾವಿದೆರ್ ವಿಟ್ಲ” ಅಭಿನಯದ ರಂಗ್ ದ ರಾಜೆ ಸುಂದರ್ ರೈ ಮಂದಾರ ಮತ್ತು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ಕೆ .ಕೆ. ಪೇಜಾವರ್ ಸಾಹಿತ್ಯ ಬರೆದ ಪಟ್ಲ ಸತೀಶ್ ಶೆಟ್ಟಿ , ಮೈಮ್ ರಾಮ್ ದಾಸ್ , ವಿನೋದ್ ರಾಜ್ ಕೋಕಿಲ ಇವರ ಹಿನ್ನಲೆ ಗಾಯನದಲ್ಲಿ ವಿನೋದ್ ರಾಜ್ ಕೋಕಿಲ ಇವರ ಸಂಗೀತ ನಿರ್ದೇಶನದಲ್ಲಿ ನಿತಿನ್ ಹೊಸಂಗಡಿ ನಿರ್ದೇಶನದ ಅದ್ಧೂರಿ ಭಕ್ತಿ ಪ್ರಧಾನ ತುಳು ನಾಟಕ “ಕಲ್ಜಿಗದ ಕಾಳಿ ಮಂತ್ರದೇವತೆ” ಮಂಗಳೂರಿನ ಪುರಭವನದಲ್ಲಿ ಜುಲೈ 26 ಬುಧವಾರದಂದು ಯಶಸ್ವಿ ಪ್ರದರ್ಶನ ಕಂಡಿತು.
ನಾಟಕ ಪ್ರದರ್ಶನದ ಮೊದಲು ದೀಪ ಹಚ್ಚುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಜರುಗಿತು ಅತಿಥಿಗಳಾಗಿ ಶ್ರೀ ಆದಿತ್ಯ ಪೂಜಾರಿ ಶ್ರೀ ಸತ್ಯ ಮಂತ್ರದೇವತೆ ಸನ್ನಿಧಿ ಬೋಳಿಯಾರ್,ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸುಂದರ್ ರೈ ಮಂದಾರ,A.K. ವಿಜಯ್ ಕೋಕಿಲ ,ಸ್ವರಾಜ್ ಶೆಟ್ಟಿ ,ಶಿವಾನಂದ ಶೆಟ್ಟಿ ಮಂಗಲ್ಪಾಡಿ,ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಸುಧಾಕರ ಪೂಜಾರಿ ಕೇಪು ಭಾಗವಹಿಸಿದರು. ಮಳೆಯ ನಡುವೆಯೂ ಪ್ರೇಕ್ಷಕರಿಂದ ಪುರಭವನ ಭರ್ತಿಯಾಗಿದ್ದು ನಾಟಕ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.