Home ಕರಾವಳಿ ಶಾಲೆಗೆ ರಜೆ ಕೊಟ್ಟ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮಕ್ಕಳಿಂದ ವಿಶಿಷ್ಠ ರೀತಿಯಲ್ಲಿ ಅಭಿನಂದನೆ

ಶಾಲೆಗೆ ರಜೆ ಕೊಟ್ಟ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮಕ್ಕಳಿಂದ ವಿಶಿಷ್ಠ ರೀತಿಯಲ್ಲಿ ಅಭಿನಂದನೆ

0

ಮಂಗಳೂರು;ದ.ಕ ಜಿಲ್ಲೆಯಲ್ಲಿ ಎಡೆ ಬಿಡದೆ ಬೀಳುತ್ತಿರುವ ಭಾರೀ ಮಳೆಗೆ ದ.ಕ ಜಿಲ್ಲಾಧಿಕಾರಿ ಮುಗಿಲನ್ ಮುಲ್ಲೈ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗೆ ರಜೆ ನೀಡಿದ್ದರು.ಈ ಬಗ್ಗೆ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳು ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ವಿದ್ಯಾರ್ಥಿಯೋರ್ವ ತನ್ನ ಕಚೇರಿಯೊಂದರಲ್ಲಿ ದ.ಕ ಜಿಲ್ಲಾಧಿಕಾರಿಯ ಹಲವು ಫೋಟೋಗಳನ್ನು ಅಂಟಿಸಿ ಕೂತಿದ್ದು, ಆತನ ಬಳಿ ಇನ್ನೋರ್ವ ಬಂದು ಇದು ಯಾರ ಫೋಟೋ ಇಷ್ಟೋಂದು ಅಂಟಿಸಿದ್ದೀಯಾ ಎಂದು ಕೇಳುತ್ತಾನೆ.


ಆಗ ಆ ವಿದ್ಯಾರ್ಥಿ ಇದು ನಮ್ಮ ಜಿಲ್ಲಾಧಿಕಾರಿ. ಮಳೆ ಬಂದಾಗ ನಮಗೆ ಶಾಲೆಗೆ ರಜೆ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಫೋಟೋ ತೋರಿಸಿ ವಿವರಿಸುತ್ತಾನೆ. ಈ ಸಂದರ್ಭ ಮತ್ತೋರ್ವ ವಿದ್ಯಾರ್ಥಿ ಬಂದು ಜಿಲ್ಲಾಧಿಕಾರಿಗೆ ಜೈ ಎಂದು ಘೋಷಣೆ ಕೂಗುತ್ತಿರುವುದು ಕಾಣಬಹುದು.ಜಿಲ್ಲಾಧಿಕಾರಿ ಫೊಟೋ ತಬ್ಬಿಕೊಂಡು ಗೌರವ ಕೊಡುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಚ್ಚಿನ ಡಿಸಿಗೆ ವಿದ್ಯಾರ್ಥಿಗಳ ಅಭಿನಂದನೆಯ ವಿಡಿಯೋ ಭಾರೀ ಹಂಚಿಕೆಯಾಗಿದೆ.

LEAVE A REPLY

Please enter your comment!
Please enter your name here