Home ಕರಾವಳಿ ನಾಟೆಕಲ್: ಟ್ಯಾಂಕರ್ ಗೆ ಸೈಡ್ ಕೊಡಲು ಹೋಗಿ ಪ್ರಪಾತಕ್ಕೆ ಬಿದ್ದ ಲಾರಿ…!!

ನಾಟೆಕಲ್: ಟ್ಯಾಂಕರ್ ಗೆ ಸೈಡ್ ಕೊಡಲು ಹೋಗಿ ಪ್ರಪಾತಕ್ಕೆ ಬಿದ್ದ ಲಾರಿ…!!

0

ಮಂಗಳೂರು : ಓವರ್ ಲೋಡ್ ಇದ್ದ ಲಾರಿಯೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ನಾಟೆಕಲ್ – ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದೆ. ಈ ಘಟನೆಯಲ್ಲಿ ಲಾರಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ತುಂಬಿಕೊಂಡು ಈ ಲಾರಿ ಚಲಿಸುತ್ತಿತ್ತು. ಈ ನಡುವೆ ತಿರುವಿನಲ್ಲಿ ಬಂದ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಗೆ ಲಾರಿ ಡ್ರೈವರ್ ಸೈಡ್ ಕೊಡಲು ಹೋಗಿದ್ದಾನೆ. ಆದರೆ ಲಾರಿಯಲ್ಲಿ ಓವರ್ ಲೋಡ್ ಇದ್ದ ಹಿನ್ನೆಲೆಯಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

LEAVE A REPLY

Please enter your comment!
Please enter your name here