ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವಂತ ಗೃಹ ಲಕ್ಷ್ಮಿ ಯೋಜನೆಗೆಯ ನೋಂದಣಿಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗಿದೆ. ಈ ಮೊದಲು ವೇಳಾಪಟ್ಟಿಯಂತೆ ತೆರಳಿ ನೋಂದಣಿ ಮಾಡಲು ಅವಕಾಶ ನೀಡಲಾಗಿತ್ತು. ಈಗ ಗೃಹಲಕ್ಷ್ಮೀ ಯೋಜನೆಯ ನೋಂದಣೀಕರಣ ಮತ್ತಷ್ಟು ಸರಳಗೊಳಿಸಲಾಗಿದ್ದು, ಜಸ್ಟ್ ನೇರವಾಗಿ ಯಜಮಾನಿ ಮಹಿಳೆಯರು ಸೇವಾ ಕೇಂದ್ರಕ್ಕೆ ತೆರಳಿ ದಾಖಲೆ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿರುವಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಗೃಹ ಲಕ್ಷ್ಮಿ ಯೋಜನೆಗಾಗಿ ಅರ್ಹ ಫಲಾನುಭವಿಗಳು, ನೇರವಾಗಿ ನಿಮ್ಮ ಹತ್ತಿರದ ನೋಂದಣಿ ಸೇವಾ ಕೆಂದ್ರಕ್ಕೆ ತೆರಳಿ ತಮ್ಮ ದಾಖಲೆಗಳನ್ನು ನೀಡಿ, ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ಗೃಹಲಕ್ಷ್ಮಿ ಯೋಜನೆಗೆ ಯಾವ ಕೇಂದ್ರದಲ್ಲಿ ಎಷ್ಟು ಹೊತ್ತಿಗೆ ಯಜಮಾನಿ ಮಹಿಳೆಯರು ತೆರಳಿ ನೋಂದಣಿ ಮಾಡಿಸಬೇಕು ಎನ್ನುವ ಮಾಹಿತಿ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತಿತ್ತು. ಆ ವೇಳಾಪಟ್ಟಿಯಂತೆ ನೋಂದಣಿ ಮಾಡಿಸಹಬೇಕಾಗಿತ್ತು. ಈಗ ಎಸ್ ಎಂ ಎಸ್ ಗಾಗಿ ಕಾಯದೇ ನೇರವಾಗಿ ನೋಂದಣಿ ಕೇಂದ್ರಗಳಿಗೆ ತೆರಳಿ, ಸೂಕ್ತ ದಾಖಲೆಯನ್ನು ನೀಡಿ ಅರ್ಹ ಫಲಾನುಭವಿಗಳು ನೋಂದಾಯಿಸಿಕೊಳ್ಳುವಂತೆ ಹೇಳಿದರು.
ಅಂದಹಾಗೇ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭಗೊಂಡ ಒಂದು ಪಾರದಲ್ಲೇ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಇಂತಹ ನೋಂದಾಯಿತ ಫಲಾನುಭವಿಗಳಿಗೆ ಆಗಸ್ಟ್ 16ರ ನಂತ್ರ ಪ್ರತಿ ತಿಂಗಳು 2000 ಸಾವಿರ ಸಹಾಯಧನ ಯಜಮಾನಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ.