ತುಮಕೂರು: ಜಿಲ್ಲೆಯ ಕಾಡುಗೊಲ್ಲ ಸಮುದಾಯದ ಮೌಢ್ಯಾಚರಣೆಗೆ ನವಜಾತ ಶಿಶುವೊಂದು ಸಾವನ್ನಪ್ಪಿರುವ ಘಟನೆ ಕೋರದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಮಲ್ಲೇನಹಳ್ಳಿಯಲ್ಲಿ ಕಾಡುಗೊಲ್ಲ ಸಮಪ್ರದಾಯದಂತೆ ಹೆರಿಗೆಯಾದ ನಂತ್ರ ಬಾಣಂತಿಯನ್ನು ಊರಾಚೆಯ ಜಮೀನಿನಲ್ಲಿ ಗುಡಿಸಲಿನಲ್ಲಿ ಇರಿಸಲಾಗಿತ್ತು.
ಈ ಗುಡಿಸಲಿನಲ್ಲಿದ್ದಂತ ನವಜಾತ ಶಿಶುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು.
ಶೀತ ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ.
ಅತ್ತ ಮಗು ಸಾವನ್ನಪ್ಪಿದ್ರೇ, ಇತ್ತ ಮಗು ಮೃತಪಟ್ಟ ನಂತ್ರವೂ ತಾಯಿಯನ್ನು ಮೌಢ್ಯಾಚರಣೆಗೆ ಕಟ್ಟುಬಿದ್ದು ಕಾಡುಗೊಲ್ಲ ಸಮುದಾಯದ ಮುಖಂಡರು ಹಟ್ಟಿಯ ಒಳಗಡೆ ಬಿಟ್ಟುಕೊಂಡಿಲ್ಲ. ಮೂರು ದಿನಗಳಇಂದ ಸುರಿಯುತ್ತಿರುವ ಜಡಿ ಮಳೆಯನ್ನು ಲೆಕ್ಕಿಸದೇ ಊರಾಚೆಯ ಗುಡಿಸಿಲಿನಲ್ಲಿಯೇ ಒಂಟಿಯಾಗಿ ಮಹಿಳೆ ಜೀವಿಸುತ್ತಿದ್ದಾರೆ ಎನ್ನಲಾಗಿದೆ.
ಅಂದಹಾಗೇ ಕಾಡುಗೊಲ್ಲ ಸಮುದಾಯದ ಈ ಮಹಿಳೆಯು ಕಳೆದ ತಿಂಗಳು ಅವಧಿಗೆ ಮುನ್ನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹೀಗೆ ಜನಿಸಿದ್ದಂತ ಒಂದು ಮಗು ಈಗಾಗಲೇ ಸಾವನ್ನಪ್ಪಿತ್ತು. ಈಗ ಬಾಣಂತಿಯನ್ನು ಊರಿನಾಜೆ ಗುಡಿಸಲಿನಲ್ಲಿ ಜಡಿ ಮಳೆಗಾಳಿಯಲ್ಲಿ ಗುಡಿಸಲಿನಲ್ಲಿ ಇರಿಸಿದ್ದರಿಂದ ಶೀತ, ಉಸಿರಾಟದ ತೊಂದರೆಯಿಂದ ಮತ್ತೊಂದು ಮಗು ಮೌಢ್ಯಾಚರಣೆಗೆ ಬಲಿಯಾದಂತೆ ಆಗಿದೆ.