Home ಉಡುಪಿ ಇದು ಉಡುಪಿ, ಪೊಡವಿಗೊಡೆಯ ಶ್ರೀ ಕೃಷ್ಣನ ಊರು – ಹಿಂದುತ್ವದ ಭದ್ರಕೋಟೆ, ಯಾರನ್ನು ಬಿಟ್ಟುಕೊಡುವ ಪ್ರಶ್ನೆಯೇ...

ಇದು ಉಡುಪಿ, ಪೊಡವಿಗೊಡೆಯ ಶ್ರೀ ಕೃಷ್ಣನ ಊರು – ಹಿಂದುತ್ವದ ಭದ್ರಕೋಟೆ, ಯಾರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ- ಯಶ್ ಪಾಲ್ ಸುವರ್ಣ

0

ಉಡುಪಿ‌ಯ ನೇತ್ರ ಜ್ಯೋತಿ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋಗಳನ್ನು ಕಳ್ಳತನದಿಂದ ಚಿತ್ರೀಕರಿಸಿ ಅವುಗಳನ್ನು ಸಮಾಜಘಾತುಕ ಶೆಕ್ತಿಗಳ ಕೈಯಲ್ಲಿ ಕೊಟ್ಟು ಅವರ ಜೀವನವನ್ನು ಹಾಳು ಮಾಡುವ ಪ್ರಯತ್ನದಲ್ಲಿ ಭಾಗಿಯಾದ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಸರಕಾರ ಕೈ ತೊಳೆದುಕೊಳ್ಳು ಕೆಲಸ ಮಾಡುತ್ತಿದೆ. ಹೀಗಾಗಲು ಯಾವುದೇ ಕಾರಣಕ್ಕೆ ಬಿಡುವುದಿಲ್ಲ. ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವವರೆಗೆ ಸುಮ್ಮನಿರುವುದಿಲ್ಲ.


ಹಾಗೆಯೇ, ಈ ಪ್ರಕರಣದ ಬಗ್ಗೆ ಧ್ವನಿಯೆತ್ತಿದ “ರಶ್ಮಿ ಸಾಮಂತ್” ಅವರಿಗೆ ಪೊಲೀಸ್ ಇಲಾಖೆ ಕೊಟ್ಟ ಕಿರುಕುಳದ ಬಗ್ಗೆ ಸಂಬಂಧಪಟ್ಟವರಿಂದ ವರದಿ ಕೇಳಿದ್ದು, ಯಾವುದೇ ಕಾರಣಕ್ಕೂ ರಶ್ಮಿ ಅವರಿಗೆ ಅಥವಾ ಅವರ ಕುಟುಂಬಕ್ಕೆ ತೊಂದರೆ ಕೊಡಬಾರದು, ಕೊಟ್ಟರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದೇನೆ.

ರಶ್ಮಿಯವರ ಮನೆಗೆ ತೆರಳಿ (ರಶ್ಮಿಯವರು ಹೊರರಾಜ್ಯ ಪ್ರವಾಸದಲ್ಲಿದ್ದಾರೆ) ಅವರ ಮಾತೃಶ್ರಿಯವರನ್ನು ಭೇಟಿಮಾಡಿ ಯಾವುದೇ ಕಾರಣಕ್ಕೂ ಹೆದರಬಾರದು, ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಧೈರ್ಯ ಹೇಳಿದರು.

LEAVE A REPLY

Please enter your comment!
Please enter your name here