Home ಉಡುಪಿ ಅಕ್ರಮ ನಿಲ್ಲದಿದ್ದಲಿ ಹೋರಾಟ ಅನಿವಾರ್ಯ:-ಶುಭದ ರಾವ್

ಅಕ್ರಮ ನಿಲ್ಲದಿದ್ದಲಿ ಹೋರಾಟ ಅನಿವಾರ್ಯ:-ಶುಭದ ರಾವ್

0

ಉಡುಪಿ: ರಾಜ್ಯದಲ್ಲಿ ಸರಕಾರ ಬದಲಾದರೂ ತಾಲೂಕಿನಾದ್ಯಂತ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿದ್ದು ಇದಕ್ಕೆ ಅಧಿಕಾರಿಗಳ ಸಹಕಾರವೇ ಕಾರಣ ಇದನ್ನು ತಕ್ಷಣ ನಿಲ್ಲಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ತಿಳಿಸಿದ್ದಾರೆ.


ತಾಲೂಕಿನಾದ್ಯಂತ ಕಾನೂನಿನಂತೆ ಪರವಾನಿಗೆ ಪಡೆದು ಗಣಿಗಾರಿಕೆ‌‌ ನಡೆಸುವವರು ಕೆಲವು ಜನ ಮಾತ್ರ, ಆದರೆ ಯಾವುದೇ ಪರವಾನಿಗೆ ಇಲ್ಲದೆ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಇದನ್ನು‌ ತಕ್ಷಣ ನಿಲ್ಲಿಸಬೇಕು‌‌ ಈ ಬಗ್ಗೆ ಸಚಿವರ ಗಮನಕ್ಕೂ ತಂದಿದ್ದೇವೆ ಎಂದು‌ ಅವರು ಹೇಳಿದ್ದಾರೆ

ಡೀಮ್ಡ್ ಅರಣ್ಯ, ಗೋಮಾಳ ಹಾಗೂ ಸರಕಾರಿ ಜಾಗದಲ್ಲಿ ಗಣಿ ಲೂಟಿಯಾಗುತ್ತಿದೆ ಇದರಲ್ಲಿ ಸ್ವತಃ‌ ಅಧಿಕಾರಿಗಳು ಶಾಮೀಲಾಗಿ ಸಹಕಾರ ನೀಡುತ್ತಿರುವುದು ಎದ್ದು ಕಾಣುತ್ತಿದೆ ತಾಲೂಕಿನ ಬೆಳ್ಮಣ್, ಸೂಡಾ, ನಿಟ್ಟೆ, ಗುಂಡ್ಯಡ್ಕ, ರೆಂಜಾಳ ಮುಂತಾದ ಕಡೆಗಳಲ್ಲಿ ಗಣಿ ಲೂಟಿಯಾಗುತ್ತಿದ್ದು ಸರಕಾರಕ್ಕೆ ಯಾವುದೇ ರಾಜಸ್ವ ಪಾವತಿಸದೆ ವ್ಯವಹಾರ ನಡೆಯುತ್ತಿದೆ ಸಮುದ್ರಕ್ಕೆ ಕಲ್ಲು ಹಾಕುವ ನೆಪದಲ್ಲಿ ನಂದಳಿಕೆ, ಬೆಳ್ಮಣ್ಣು ಭಾಗ ಲೂಟಿಯಾಗಿದೆ ಇಲ್ಲಿ‌ಯೂ ಗಣಿ ಅಧಿಕಾರಿಗಳು ರಾಜ ಧನವನ್ನು ಸಂಗ್ರಹಿಸದೆ ಸರಕಾರಕ್ಕೆ ದ್ರೋಹ ಎಸಗುತ್ತಿದ್ದರೆ ಗಣಿ ಲೂಟಿಕೋರರ ಜತೆ ಶಾಮೀಲಾಗಿ ತಮ್ಮ ಜೇಬು ತುಂಬಿಸಿಕೊಳ್ಳುತಿದ್ದಾರೆ ಎಂದು ಆರೋಪಿಸಿದ್ದಾರೆ.

ಡೀಮ್ಡ್ ಅರಣ್ಯ ಮತ್ತು ಗೋಮಾಳದಲ್ಲಿ ಮನೆ ಕಟ್ಟಿ ಕುಳಿತವರಿಗೆ ಹಕ್ಕು ಪತ್ರ ನೀಡಲು‌ ಆಕ್ಷೇಪಿಸುವ ಈ ಅಧಿಕಾರಿಗಳು, ಗಣಿ ಲೂಟಿಗೆ ಅವಕಾಶ ಕಲ್ಪಿಸಿರುವುದು ಖೇದಕರ ತಕ್ಷಣ ಈ ಅಕ್ರಮ ಲೂಟಿಯನ್ನು ಸಂಬಂಧಿಸಿದ ಅಧಿಕಾರಿಗಳು ತಡೆಗಟ್ಟಬೇಕು ಇಲ್ಲವಾದರೆ ಮುಂದೆಯಾಗುವ ಸಮಸ್ಯೆಗೆ ಅಧಿಕಾರಿಗಳೇ ನೇರ ಹೊಣೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here