ಬಂಟ್ವಾಳ: ಊಟ ಮಾಡಲು ಬಾರ್ ಒಂದಕ್ಕೆ ತೆರಳಿದ ಮೂವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದಲ್ಲಿರುವ ಬಾರೊಂದರಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕು ಕೇಪುಗ್ರಾಮದ ಬಡಕೋಡಿ ನಿವಾಸಿ ವಿಶ್ವನಾಥ ರವರ ಪುತ್ರ ಸುರೇಶ್ ದೂರುದಾರರಾಗಿದ್ದಾರೆ. ನಿಶಾಂತ್ ಶೆಟ್ಟಿ, ರಾಕೇಶ್, ಚೇತು ಯಾನೆ ಚೇತನ್ ಪ್ರಕರಣದ ಆರೋಪಿಗಳಾಗಿದ್ದಾರೆ. ನಾನು ಕೇಪು ಗ್ರಾಮದ ಗಣೇಶ್ ಮತ್ತು ವಿಟ್ಲದ ಸುರೇಶ್ ರವರೊಂದಿಗೆ ಜು. 21 ರಂದು ರಾತ್ರಿ ಬಂಟ್ವಾಳ ತಾಲೂಕು, ವಿಟ್ಲಕಸಬಾ ಗ್ರಾಮದ, ಬಾರೊಂದಕ್ಕೆ ಊಟಕ್ಕೆಂದು ತೆರಳಿ ಅಲ್ಲಿ ಮಾತನಾಡುತ್ತಿದ್ದ ವೇಳೆ ಆರೋಪಿ ನಿಶಾಂತ್ ಶೆಟ್ಟಿ ನನ್ನ ಮೇಲಿನ ಯಾವುದೋ ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ತಂಡದೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.ಈ ವೇಳೆ ತಡೆಯಲು ಬಂದ ನನ್ನ ಸ್ನೇಹಿತರ ಮೇಲೂ ತಂಡ ಹಲ್ಲೆ ನಡೆಸಿದೆ. ಬಳಿಕ ಬಾರ್ ನ ಸಿಬ್ಬಂದಿಗಳು ಬಂದು ತಡೆದಾಗ ತಂಡ ಜೀವಬೆದರಿಕೆ ಒಡ್ಡಿ ಪರಾರಿಯಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.