Home ಸಿನೆಮಾ ಜುಲೈ 29ರಂದು ಬಿಡುಗಡೆಯಾಗಲಿದೆ “ಸದ್ದಿಲ್ಲದ ಮೆರವಣಿಗೆ” ವಿಡಿಯೋ ಆಲ್ಬಂ ಹಾಡು

ಜುಲೈ 29ರಂದು ಬಿಡುಗಡೆಯಾಗಲಿದೆ “ಸದ್ದಿಲ್ಲದ ಮೆರವಣಿಗೆ” ವಿಡಿಯೋ ಆಲ್ಬಂ ಹಾಡು

0

ಮಂಗಳೂರು: ವಾಗ್ಮಿ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಪ್ರದೀಪ್ ನಾಯ್ಕ್ ಛಾಯಾಗ್ರಹಣ ಹಾಗೂ ನಿರ್ದೇಶನದ ಸಾಬಿಕ್ ಪುತ್ತೂರು ಕಥೆ,ಸಾಹಿತ್ಯ ಬರೆದು ಸಂಗೀತ ನೀಡಿರುವ “ಸದ್ದಿಲ್ಲದ ಮೆರವಣಿಗೆ” ಕನ್ನಡ ವಿಡಿಯೋ ಆಲ್ಬಂ ಹಾಡು ಇದೇ ಬರುವ ಜುಲೈ 29 ರಂದು “Essence Media” ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ. ಈ ಹಾಡಿನಲ್ಲಿ ಕರಣ್ ಪೂಜಾರಿ ಹಾಗೂ ಗೌಜಿಗಮ್ಮತ್ ತುಳು ಸಿನಿಮಾದ ಖ್ಯಾತಿಯ ಸ್ವಾತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ನಿನ್ನೆ ಬಿಡುಗಡೆಯಾದ ಹಾಡಿನ ಟ್ರೈಲರ್ ಸದ್ದು ಮಾಡುತ್ತಿದೆ. ಇದೇ ತಂಡ ಈ ಹಿಂದೆ ತಯಾರಿಸಿದ್ದ “ಅಮರ” ಹಾಗೂ “ಸಂಚಾರಿ” ಆಲ್ಬಂ ಹಾಡು ಸೂಪರ್ ಹಿಟ್ ಆಗಿದ್ದು ಯೂಟ್ಯೂಬ್ ನಲ್ಲಿ ದಾಖಲೆಯನ್ನು ಮಾಡಿದೆ.
“ಸದ್ದಿಲ್ಲದ ಮೆರವಣಿಗೆ” ಹಾಡನ್ನು ಜಿಲ್ಲೆಯ ಖ್ಯಾತ ಗಾಯಕರಾದ ನಿಯಾಝ್ ನಿಜ್ಜು ಹಾಗೂ ಮಲ್ಲಿಕಾ ಮಟ್ಟಿ ಹಾಡಿದ್ದು, ಪ್ರಚಾರ ಕಲೆ ಗಣೇಶ್. ಕೆ , ನಿರ್ಮಾಣ ನಿರ್ವಹಣೆ ಅವಿನಾಶ್ ಹಾಗೂ ಮಾರ್ಕೆಟಿಂಗ್ ನ ಜವಾಬ್ದಾರಿಯನ್ನು WEE music ತಂಡ ವಹಿಸಿಕೊಂಡಿದೆ.


LEAVE A REPLY

Please enter your comment!
Please enter your name here