ಮಂಗಳೂರು: ಎಂಎಂಎಂ ಗ್ರೂಪ್ಸ್-ಯಶಸ್ ಸ್ಟುಡಿಯೋಸ್ ನಿರ್ಮಾಣದ, ನವೀನ್ ಜಿ.ಪಿ ನಿರ್ದೇಶನದ ಮಿಸ್ಟರ್ ಮದಿಮಾಯೆ ತುಳು ಸಿನಿಮಾವು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ.
ಸಾಯಿಕೃಷ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಸಿನಿಮಾದಲ್ಲಿ ಜ್ಯೋತಿಷ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ಪ್ರವೀಣ್ ಮರ್ಕಮೆ, ರವಿ ರಾಮಕುಂಜ, ಸಂದೀಪ್ ಶೆಟ್ಟಿ, ರಮೇಶ್ ಶೆಟ್ಟಿ ಮಿಜಾರು, ಸವ್ಯರಾಜ್ ಕಲ್ಲಡ್ಕ, ಪೃಥ್ವಿ ಪೊಳಲಿ ಹಾಗೂ ಹೊಸ ಕಲಾವಿದರು ಅಭಿನಯಿಸಿದ್ದಾರೆ. ಮಿಥುನ್ ಕೆ.ಎಸ್ ಸಿನಿಮಾದ ನಿರ್ಮಾಪಕರಾಗಿದ್ದು, ರಾಜೇಶ್ ಫೆರಾವೊ ಸಹ ನಿರ್ಮಾಪಕರಾಗಿದ್ದಾರೆ. ಸೌಜನ್ಯ ಶೆಟ್ಟಿ, ಸೌಮ್ಯ ಚೇತನ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿರುವ ಸಿನಿಮಾಕ್ಕೆ ಪ್ರಶಾಂತ್ ಧರ್ಮಸ್ಥಳ ಅವರ ಡಿಒಪಿ, ಕೆಪಿ ಮಿಲನ್‌ರವರ ಸಂಗೀತ, ಸುಜೀತ್ ನಾಯಕ್‌ರ ಸಂಕಲನ, ಕೆ.ವೆಂಕಟೇಶ್ ಅವರ ಸಾಹಸ, ನವೀನ್ ಶೆಟ್ಟಿ ಅವರ ಸಿನಿಮಾಟೋಗ್ರಾಫಿ ಇದೆ. ಶ್ರೇಯಸ್ ಶೆಟ್ಟಿ ಪ್ರೋಡಕ್ಷನ್ ಮೆನೇಜರ್ ಆಗಿದ್ದು, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಪಿಆರ್‌ಒ ಆಗಿ ಕೆಲಸ ನಿರ್ವಹಿಸಿದ್ದಾರೆ.
Home ಸಿನೆಮಾ ಎಂಎಂಎಂ ಗ್ರೂಪ್ಸ್-ಯಶಸ್ ಸ್ಟುಡಿಯೋಸ್ ನಿರ್ಮಾಣದ ಮಿಸ್ಟರ್ ಮದಿಮಾಯೆ ತುಳು ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ