Home ಕರಾವಳಿ ಮಂಗಳೂರು: ನೀರು ತುಂಬಿದ ಬಕೆಟ್‌ ಗೆ ಬಿದ್ದು ಮಗು ಸಾವು

ಮಂಗಳೂರು: ನೀರು ತುಂಬಿದ ಬಕೆಟ್‌ ಗೆ ಬಿದ್ದು ಮಗು ಸಾವು

0

ಮಂಗಳೂರು: ನಗರದ ಕಾವೂರಿನಲ್ಲಿ ನೀರು ತುಂಬಿದ ಬಕೆಟ್‌ಗೆ ಬಿದ್ದು ಪುಟ್ಟ ಮಗು ಸಾವನ್ನಪ್ಪಿದೆ. ಕಾವೂರು ಮಸೀದಿ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರೋಜ್ ಅನ್ಸಾರಿ ಅವರ ಪುತ್ರಿ ಆಯಿಷಾ (1.8 ವರ್ಷ) ಈ ದುರಂತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ. ಜಾರ್ಖಂಡ್ ನ ವಲಸೆ ಕಾರ್ಮಿಕರಾಗಿರುವ ಫಿರೋಜ್ ಅನ್ಸಾರಿ ದಂಪತಿ ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬುಧವಾರ ಸಂಜೆ ಮಗು ಆಯಿಷಾ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನ ಬಕೆಟ್‌ಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ.


LEAVE A REPLY

Please enter your comment!
Please enter your name here