Home ಕರಾವಳಿ ಮಂಗಳೂರು: ಲಯನ್ಸ್ ಮತ್ತು ಲಿಯೋ ಕ್ಲಬ್ ಫಲ್ಗುಣಿ ಇದರ 2023-24 ರ ಸಾಲಿನ ಪದಾಧಿಕಾರಿಗಳ ಪದಗ್ರಹಣ...

ಮಂಗಳೂರು: ಲಯನ್ಸ್ ಮತ್ತು ಲಿಯೋ ಕ್ಲಬ್ ಫಲ್ಗುಣಿ ಇದರ 2023-24 ರ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಮಂಗಳೂರು: ಲಯನ್ಸ್ ಮತ್ತು ಲಿಯೋ ಕ್ಲಬ್ ಫಲ್ಗುಣಿ ಇದರ 2023-24 ರ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ ೧೫ ಜುಲೈ 2023ರ ಶನಿವಾರ ಸಂಜೆ ಕೂಳೂರು ಫಲ್ಗುಣಿ ಸಭಾಂಗಣದಲ್ಲಿ ನೆರವೇರಿತು.


ಮಾಜಿ ಜಿಲ್ಲಾ ಗವರ್ನರ್ ಲಯನ್ ಸಂಜೀತ್ ಎಸ್ ಶೆಟ್ಟಿ ಅವರು 2023-24 ರ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಲಯನ್ಸ್ ಕ್ಲಬ್ ಫಲ್ಗುಣಿ ನೂತನ ಅಧ್ಯಕ್ಷರಾಗಿ ಲಯನ್ ಭಾಸ್ಕರ್ ಕೋಟ್ಯಾನ್, ಕಾರ್ಯದರ್ಶಿಯಾಗಿ ಸಿಎ ಶ್ರವಣ್ ಕುಮಾರ್, ಖಜಾಂಚಿಯಾಗಿ ಶ್ರವಣ್ ಕೂಳೂರು ಹಾಗೂ ಲಿಯೋ ಕ್ಲಬ್ ಫಲ್ಗುಣಿ ನೂತನ ಅಧ್ಯಕ್ಷರಾಗಿ ಅಭಿಲಾಷ ಸುವರ್ಣ ಕಾರ್ಯದರ್ಶಿಯಾಗಿ ರೋಹಿಲ್ ಪಿ ಶೆಟ್ಟಿ ಮತ್ತು ಖಜಾಂಜಿಯಾಗಿ ಸಮೀಕ್ಷ ಸುವರ್ಣ ಅಧಿಕಾರ ಸ್ವೀಕರಿಸಿದರು.

ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಪಾಲ್ಗುಣಿಯ ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ನಿಕಟ ಪೂರ್ವ ಪದಾಧಿಕಾರಿಗಳಿಗೆ ಗೌರವವನ್ನು ಸೂಚಿಸಿದರು. ಕ್ಲಬ್ ನ ವತಿಯಿಂದ ವಿದ್ಯಾರ್ಥಿಗಳಿಗೆ 50000 ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಿದರು ಮತ್ತು ಅಶಕ್ತ ಯುವತಿಗೆ ಅನಾರೋಗ್ಯ ಚಿಕಿತ್ಸೆಗೆ 10000 ಸಹಾಯಧನ ನೀಡಲಾಯಿತು.

ಮಾಜಿ ಜಿಲ್ಲಾ ಗವರ್ನರ್ ಲಯನ್ ಸಂಜೀತ್ ಶೆಟ್ಟಿರವರು ಮತ್ತು ಜಿಲ್ಲಾ ಸಂಪುಟ ಕಾರ್ಯದರ್ಶಿ ಓಸ್ ವಲ್ಡ್ ಡಿಸೋಜ ಇವರು ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಂತ್ಯಾಧ್ಯಕ್ಷರಾದ ಜಯ ಪ್ರಕಾಶ್, ಜಿಲ್ಲಾ ವಲಯಾಧ್ಯಕ್ಷರಾದ ಕುಸುಮ ಯು ರಾವ್, ಜಿಲ್ಲಾ ಲಿಯೋ ಕಾರ್ಯದರ್ಶಿ ಸಮೀಕ್ಷಾ ಸುವರ್ಣ, ಜಿಲ್ಲಾ ಲಿಯೋ ವಲಯಾಧ್ಯಕ್ಷರಾದ ದೀಕ್ಷಿತಾ ಕೋಟ್ಯಾನ್ ಮತ್ತು ಲಯನ್ಸ್ ಫಲ್ಗುಣಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಿಎ ಶ್ರವಣ್ ಕುಮಾರ್ ವಂದಿಸಿದರು. ಲಯನ್ ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here