ಉಡುಪಿ: ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ನವಿಲೊಂದನ್ನು ತಂದೆ ಮಗ ಸೇರಿ ರಕ್ಷಣೆ ಮಾಡಿರುವ ಉಡುಪಿ ಜಿಲ್ಲೆಯ ಉದ್ಯಾವರದ ಸಮೀಪದ ಕಲಾಯಿಬೈಲ್ ಎಂಬಲ್ಲಿ ನಡೆದಿದೆ.
ಇಲ್ಲಿನ ಕಲಾಯಿಬೈಲ್ ನಿವಾಸಿಯಾಗಿರುವ ವಿಜಯಕುಮಾರ್ ಹಾಗು ಅವರ ಮಗ ವಿಶಾಲ್ ನವಿಲನ್ನು ರಕ್ಷಣೆ ಮಾಡಿವರಾಗಿದ್ದಾರೆ. ನವಿಲೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ತಕ್ಷಣ ಅದರ ರಕ್ಷಣೆಗೆ ಮುಂದಾಗಿದ್ದಾರೆ. ವಿಶಾಲ್ ಹಗ್ಗದ ಸಹಾಯದಿಂದ ಬಾವಿಗೆ ಇಳಿದು, ಕಾಲಿನ ಮೂಲಕ ನವಿಲನ್ನು ಮೇಲೆತ್ತಿದರು.
ಬಳಿಕ ವಿಜಯಕುಮಾರ್ ನವಿಲನ್ನು ಹಿಡಿದು ಬಾವಿಯ ಹೊರಗೆ ತಂದರು. ತಂದೆ ಮತ್ತು ಮಗನ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ವುಗೆ ವ್ಯಕ್ತವಾಗಿದೆ.